ಇಂಟ್ರೊಸಂಗಾತಿ ಆಯ್ಕೆಯ ಬಗ್ಗೆ ಯುವಜನತೆಯಲ್ಲಿಸಾಕಷ್ಟು ಪರವಿರೋಧಗಳಿವೆ. ಆದರೆ ಈಗ ಮದುವೆ ಆಗಬೇಕೋ ಇಲ್ಲವೋ ಎಂಬ ಆಯ್ಕೆ ಚರ್ಚೆಗೆ ಒಳಗಾಗಿದೆ.
ಲವಲವಿಕೆ ಸುದ್ದಿಲೋಕ
ತನ್ನದೇ ವಯೋಮಾನದ ಪಕ್ಕದ ಮನೆಯ ಹುಡುಗಿಗೆ ಮದುವೆ ಆಯ್ತು, ಸ್ನೇಹಿತೆಯ ಮಗುವಿನ ನಾಮಕರಣವೂ ಮುಗಿಯಿತು. ಆದರೆ ತನಗೆ ಮಾತ್ರ ಮದುವೆ ಯೋಗ ಕೂಡಿ ಬಂದಿಲ್ಲಎಂಬ ಕೊರಗು ಅವಳಿಗಿಲ್ಲ. ಸ್ನೇಹಿತರೆಲ್ಲಸಂಸಾರದ ಜಂಜಾಟದಲ್ಲಿಬಿಝಿ ಇದ್ದರೂ ಇವನಿಗೆ ಮಾತ್ರ ಪತ್ನಿ, ಮಕ್ಕಳನ್ನು ಒಳಗೊಂಡ ಸುಂದರ ಪ್ರಪಂಚದಲ್ಲಿವಿಹರಿಸುವ ಗಡಿಬಿಡಿ ಇಲ್ಲ. ಹಾಗಂತ ಮದುವೆಯ ವಯಸ್ಸು ಮೀರಿದ್ದರ ಪರಿವೆಯೇ ಇಲ್ಲಎಂದಲ್ಲ. ಆದರೆ ಸಮಾಜ ನಿಗದಿಪಡಿಸಿದ ಮದುವೆ ಕುರಿತಾದ ವಯೋಮಾನ, ಕೆಲವು ಮಾನದಂಡಗಳ ಮಿತಿಯಲ್ಲೇ ಸಂಗಾತಿ ಆಯ್ಕೆ ಅಥವಾ ವೈವಾಹಿಕ ಬದುಕನ್ನು ಆರಂಭಿಸಬೇಕು ಎಂಬ ಮಿತಿಯನ್ನು ಮೀರಿ ಆಯ್ಕೆ ಸ್ವಾತಂತ್ರ್ಯ ಹೊಸ ಆಯಾಮ ಕಂಡುಕಂಡಿದೆ. ಹೀಗಾಗಿ ಆಯ್ಕೆ ಈಗ ಸಂಗಾತಿಗಾಗಿ ಅಲ್ಲ, ಮದುವೆ ಬೇಕೋ ಬೇಡವೋ ಎನ್ನುವದ್ದು.
ಹೊಸ ಅಲೆ
ಮದುವೆಯ ವಯಸ್ಸನ್ನೂ ಮೀರಿ ಸಂಗಾತಿಯ ಹುಡುಕಾಟ ಒಂದೆಡೆಯಾದರೆ ಮದುವೆಯೇ ಆಗಬೇಕು ಅಂದರೆ ಸಂಗಾತಿ ಹೇಗಿರಬೇಕು ಎಂಬ ಸ್ಪಷ್ಟ ದೃಷ್ಟಿಕೋನದೊಂದಿಗೆ ಯುವ ವಲಯದಲ್ಲಿಈಗ ಮದುವೆಯ ಕುರಿತಾದ ವ್ಯಾಖ್ಯಾನ ಬೇರೆ ಆಗಿದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಪೂರಕವಾಗಿ ಡೇಟಿಂಗ್ ಆ್ಯಪ್ ಒಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿಮದುವೆಯ ಆಯ್ಕೆ ಕುರಿತು ಭಾರತೀಯರ ಬದಲಾದ ಮನಸ್ಥಿತಿ ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿಸಮಾಜದಲ್ಲಿಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂನಿರ್ದಿಷ್ಟ ವಯಸ್ಸಿಗೆ ನಡೆಯಲೇಬೇಕಾದ ಕಡ್ಡಾಯ ಮೈಲಿಗಲ್ಲುಎಂದು ಭಾವಿಸಲಾಗಿತ್ತು. ಆದರೆ, ಇಂದಿನ ಯುವ ಪೀಳಿಗೆಗೆ ಮದುವೆ ಕೇವಲ ಒಂದು ಆಯ್ಕೆಯಷ್ಟೇ ಹೊರತು ಕಡ್ಡಾಯವಲ್ಲಎಂಬ ಹೊಸ ಅಲೆ ಆರಂಭವಾಗಿದೆ.
ವೈಯಕ್ತಿಕ ಆಯ್ಕೆಯಷ್ಟೆ
ಭಾರತದ ಮಹಾನಗರಗಳು, ಉಪನಗರಗಳು ಹಾಗೂ ಗ್ರಾಮೀಣ ಭಾಗಗಳ 22ರಿಂದ 35 ವರ್ಷ ವಯಸ್ಸಿನ 10,340 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿಯ ಪ್ರಕಾರ, 28 ವರ್ಷಕ್ಕಿಂತ ಮೇಲ್ಪಟ್ಟ ಶೇ. 39ಕ್ಕಿಂತ ಹೆಚ್ಚು ಒಂಟಿ ಯುವಕ, ಯುವತಿಯರು ಮದುವೆಯನ್ನು ತಮ್ಮ ಜೀವನದಲ್ಲಿಅನಿವಾರ್ಯ ಎಂದು ಪರಿಗಣಿಸದೆ ವೈಯಕ್ತಿಕ ಆಯ್ಕೆ ಎನ್ನುತ್ತಿದ್ದಾರೆ. ಈ ಮೂಲಕ ಮದುವೆಯೇ ಅಂತಿಮ ಗುರಿಯಲ್ಲಎನ್ನುವವರು ಪ್ರಾಮಾಣಿಕ ಭಾವನಾತ್ಮಕ ಬೆಸುಗೆ ಮತ್ತು ಬದ್ಧತೆಯನ್ನು ಸಂಗಾತಿಯಲ್ಲಿಬಯಸುತ್ತಿರುವವರು ಇದಕ್ಕೆ ಮದುವೆಯೊಂದೇ ಖಾತರಿ ನೀಡುವುದಿಲ್ಲಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಗಾತಿ ಆಯ್ಕೆಗಾಗಿ ನಡೆಸಿದ ಹುಡುಕಾಟದಲ್ಲಿಪರಿಚಯವಾದವರನ್ನೆಲ್ಲದೂರ ಮಾಡುತ್ತಾರೆ ಎಂದಲ್ಲ, ಅವರು ಸ್ನೇಹಿತರಾಗಿ ಮುಂದುವರಿಯಬಹುದು. ಪರಿಚಯದ ನಡುವಿನ ಮಾತುಕತೆಯಲ್ಲಿಇಷ್ಟಕಷ್ಟ ಜೊತೆಗೆ ತಮ್ಮದೇ ಆದ ವ್ಯಕ್ತಿತ್ವದ ಬಗ್ಗೆ ದೃಷ್ಟಿಕೋನ ಸಿಗುತ್ತದೆ ಎಂದಿದ್ದಾರೆ ಶೇ. 60 ಮಂದಿ. ಆನ್ ಲೈನ್ ಡೇಟಿಂಗ್ ಆ್ಯಪ್ ಗಳಲ್ಲಿವಿಭಿನ್ನ ಆಲೋಚನೆಗಳ ಜನರೊಂದಿಗೆ ಸಂವಹನ ನಡೆಸುವುದು ತಮ್ಮ ವೈಯಕ್ತಿಕ ಬೆಳವಣಿಗೆæ, ಹಳೆಯ ಕಹಿ ನೆನಪುಗಳಿಂದ ಹೊರಬರಲು ಮತ್ತು ಸಂವಹನ ಕೌಶಲ ಹೆಚ್ಚಿಸಿಕೊಳ್ಳಲು ಸಹಾಯಕ ಎಂದು ಶೇ. 23ರಷ್ಟು ಯುವಜನರು ಅಭಿಪ್ರಾಯಪಟ್ಟಿದ್ದಾರೆ.
ಬಾಕ್ಸ್
ಸ್ವಯಂ ಗೌರವ
ತಜ್ಞರ ಪ್ರಕಾರ, ‘ಇಂದಿನ ಯುವಜನತೆ ಮದುವೆ ಅಥವಾ ಬದ್ಧತೆಗೆ ವಿರುದ್ಧವಾಗಿಲ್ಲ. ಬದಲಾಗಿ ಸಮಾಜ ನಿಗದಿಪಡಿಸಿದ ಕಾಲಮಿತಿ ಮತ್ತು ನಿರೀಕ್ಷೆಗಳಿಗೆ ಬಗ್ಗದೆ ತಮಗೆ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರು ಬಯಸುತ್ತಿದ್ದಾರೆ. ಒಟ್ಟಿನಲ್ಲಿಸಂಬಂಧಗಳಲ್ಲಿಆಡಂಬರಕ್ಕಿಂತ ವೈಯಕ್ತಿಕ ನೆಮ್ಮದಿ, ಸ್ವಯಂ ಗೌರವ ಹಾಗೂ ಭಾವನಾತ್ಮಕ ಬೆಂಬಲಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ.