ಹಸಿರು ಏಲಕ್ಕಿ : ಹಸಿರು ಏಲಕ್ಕಿಯು ಸಿಹಿ ಮತ್ತು ಹೂವಿನ ಪರಿಮಳದ ಜೊತೆಗೆ ಸ್ವಲ್ಪ ಸಿಟ್ರಸ್ ಹಣ್ಣಿನಂಥ ರುಚಿ ಹೊಂದಿರುತ್ತದೆ. ಇದನ್ನು ಪಾಯಸ, ಗುಲಾಬ್ ಜಾಮೂನ್ ನಂತಹ ಸಿಹಿ ತಿನಿಸುಗಳಿಂದ ಹಿಡಿದು ಬಿರಿಯಾನಿ, ವಿವಿಧ ಬಗೆಯ ಗ್ರೇವಿ ಹಾಗೂ ಸಾರುಗಳಿಗೆ ಬಳಸಲಾಗುತ್ತದೆ. ಏಲಕ್ಕಿ ಚಹಾಕ್ಕೂ ಹಸಿರು ಏಲಕ್ಕಿ ಬಳಸಲಾಗುತ್ತದೆ. ಕಪ್ಪು ಏಲಕ್ಕಿ : ಹಸಿರು ಏಲಕ್ಕಿಗಿಂತ ಗಾತ್ರದಲ್ಲಿದೊಡ್ಡದಾಗಿರುವ ಕಪ್ಪು ಏಲಕ್ಕಿ ಗಾಢ ಬಣ್ಣ ಹೊಂದಿರುತ್ತದೆ. ಹೊಗೆಯಾಡಿದಂತಹ ಪರಿಮಳ ಮತ್ತು ಮಣ್ಣಿನ ಸುವಾಸನೆಯ ರುಚಿಯಿರುವ ಇದನ್ನು ಸಾಮಾನ್ಯವಾಗಿ ಖಾರ ರುಚಿಯ ಅಡುಗೆಗಳಲ್ಲಿ, ಮುಖ್ಯವಾಗಿ ನಿಧಾನವಾಗಿ ಬೇಯಿಸುವ ಮಾಂಸದ ಅಡುಗೆ ಹಾಗೂ ದಪ್ಪ ಗ್ರೇವಿಗಳಲ್ಲಿಬಳಸಲಾಗುತ್ತದೆ. ಇತರ ಮಸಾಲೆಗಳ ಪ್ರಬಲ ರುಚಿಯ ನಡುವೆಯೂ ತನ್ನದೇ ಆದ ವಿಶಿಷ್ಟ ಪರಿಮಳ ಉಳಿಸಿಕೊಳ್ಳುವ ಗುಣ ಇದರಲ್ಲಿದೆ. ಆದರೆ ಗಾಢ ರುಚಿ ಹೊಂದಿರುವುದರಿಂದ ಸಿಹಿ ತಿನಿಸುಗಳಲ್ಲಿಕಪ್ಪು ಏಲಕ್ಕಿಯ ಬಳಕೆ ಕಡಿಮೆ.
ಕಾಡು ಏಲಕ್ಕಿ : ಹಸಿರು ಏಲಕ್ಕಿಗಿಂತ ಗಾತ್ರ, ಬಣ್ಣ, ಪರಿಮಳ, ರುಚಿಯಲ್ಲಿವ್ಯತ್ಯಾಸವಿರುವ ಕಾಡು ಏಲಕ್ಕಿಯನ್ನು ಕಾಡು ಮಸಾಲೆ ಏಲಕ್ಕಿ ಎಂದೂ ಕರೆಯಲಾಗುತ್ತದೆ. ಸಾಂಪ್ರದಾಯಿಕ ಪಾನೀಯಗಳು ಮತ್ತು ಕೆಲವು ಮನೆಮದ್ದುಗಳಲ್ಲಿಇದರ ಬಳಕೆಯಿದೆ. ಗರಂ ಮಸಾಲೆ ಸೇರಿದಂತೆ ವಿವಿಧ ಮಸಾಲೆ ಪುಡಿಗಳ ತಯಾರಿಕೆಯಲ್ಲಿಇದನ್ನು ಬಳಸಲಾಗುತ್ತದೆ. ಕೆಲವು ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳ ಅಡುಗೆ ಪದ್ಧತಿಗಳಲ್ಲಿಕಾಡು ಏಲಕ್ಕಿಗೆ ವಿಶೇಷ ಸ್ಥಾನವಿದೆ. ಕೆಲವು ಪ್ರದೇಶಗಳ ಸ್ಥಳೀಯ ರುಚಿಗೆ ಮಾಂಸದ ಅಡುಗೆ, ಸಾರು, ಮಸಾಲೆ ಪದಾರ್ಥಗಳಿಗೆ ಇದನ್ನು ಬಳಸುತ್ತಾರೆ.