ಪ್ರತಿಯೊಬ್ಬರು ಕಾನೂನು ಕಡ್ಡಾಯ ಪಾಲಿಸಿ

Contributed by: Vijaykumar.belde@timesofindia.com|Vijaya Karnataka•
authorities organized a program on legal awareness
ಚಿತ್ರ:9ಬಿಕೆ1

ಬಸವಕಲ್ಯಾಣ ನಗರದ ಬಿಕೆಡಿಬಿ ಸಭಾಂಗಣದಲ್ಲಿನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೇಯಾ ಸುನೀಲ್ ಉಸ್ತುರೆ ಉದ್ಘಾಟಿಸಿದರು.
ಪ್ರತಿಯೊಬ್ಬರು ಕಾನೂನು ಕಡ್ಡಾಯ ಪಾಲಿಸಿ

ವಿಕ ಸುದ್ದಿಲೋಕ ಬಸವಕಲ್ಯಾಣ

ಪ್ರತಿಯೊಬ್ಬ ನಾಗರಿಕರೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು. ಅದನ್ನು ತಮ್ಮ ದೈನಂದಿನ ಜೀವನದಲ್ಲಿಕಡ್ಡಾಯವಾಗಿ ಪಾಲಿಸಬೇಕು ಎಂದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೇಯಾ ಸುನೀಲ್ ಉಸ್ತುರೆ ಹೇಳಿದರು.

ನಗರದ ಬಿಕೆಡಿಬಿ ಸಭಾಂಗಣದಲ್ಲಿತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ, ವಾರ್ತಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ತಾಪಂ, ಸಮಾಜ ಕಲ್ಯಾಣ ಇಲಾಖೆ, ತಾಲೂಕಾಡಳಿತ, ನಗರಸಭೆ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿಶಾಂತಿ, ಸುವ್ಯವಸ್ಥೆ ಹಾಗೂ ಸಮಾನತೆ ನೆಲೆಗೊಳ್ಳಲು ಕಾನೂನು ಪಾಲನೆ ಅತ್ಯಗತ್ಯವಾಗಿದೆ. ಕಾನೂನಿನ ಕುರಿತು ಅಜ್ಞಾನದಿಂದ ತೊಂದರೆಗೆ ಸಿಲುಕಿಕೊಳ್ಳದೆ, ಪ್ರತಿಯೊಬ್ಬರೂ ಕಾನೂನಿನ ಮೂಲಭೂತ ಅಂಶ ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು. ವಕೀಲರ ಸಂಘದ ಉಪಾಧ್ಯಕ್ಷೆ ರೇಣುಕಾ ಮಠಪತಿ, ಹಿರಿಯ ಸಿವಿಲ್ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಬಾಲಾಜಿ ಅದೆಪ್ಪಾ, ತಾಪಂ ಇಒ ರಮೇಶ ಸೆಲ್ಫಿ, ಪ್ರಮುಖರಾದ ಶ್ರೀದೇವಿ, ದಿಲೀಪಕುಮಾರ ಉತ್ತಮ, ಡಾ.ಅಶೋಕ ಮೈಲಾರೆ, ಡಾ.ಯುವರಾಜ್ , ಮನೋಜಕುಮಾರ, ಕನ್ಯಾಕುಮಾರಿ, ರವಿ ಖಂಡಾಳೆ, ಅರುಣಕುಮಾರ, ಜ್ಯೋತಿ ಲಕ್ಷಿತ್ರ್ಮ, ಸೀಮಾ ಆರ್ .ಚಟ್ನಳ್ಳಿ ಸೇರಿ ಅನೇಕರಿದ್ದರು.