ಕನ್ನಡ ಭಾಷೆ, ಪ್ರಕಾಶನ ಲೋಕಕ್ಕೆ ಕೊನೇಕ್ ಕೊಡುಗೆ ಅಪಾರ

Contributed by: chandruhiremath06@gmail.com|Vijaya Karnataka•
dr basavaraj koneks the honored leader of kannada literary conference
*ಚಿತ್ರ:ಕಸಾಪ*

ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ್ ಅವರನ್ನು ತಾಲೂಕು ಕಸಾಪ ಮುಖಂಡರು ಅಧಿಕೃತ ಆಹ್ವಾನ ನೀಡಿ ಸತ್ಕರಿಸಿದರು.
* 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಡಾ.ಬಸವರಾಜ ಕೊನೇಕ್ ಗೆ ಆಹ್ವಾನ

ಪ್ರಕಾಶನ ಲೋಕಕ್ಕೆ ಕೊನೇಕ್ ಕೊಡುಗೆ ಅಪಾರ

ವಿಕ ಸುದ್ದಿಲೋಕ ಕಲಬುರಗಿ

ತಾಲೂಕು ಕಸಾಪದಿಂದ ನಗರದ ಕನ್ನಡ ಭವನದಲ್ಲಿನ.15ರಂದು ನಡೆಯುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ್ ಅವರನ್ನು ಅಧಿಕೃತ ಆಹ್ವಾನ ನೀಡಿ ಸತ್ಕರಿಸಲಾಯಿತು.

ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆ ಮತ್ತು ಪ್ರಕಾಶನ ಲೋಕಕ್ಕೆ ಡಾ.ಬಸವರಾಜ ಕೊನೇಕ್ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಸಾಹಿತ್ಯದಲ್ಲಿನ ಜ್ಞಾನ ಸಂಪತ್ತು ಎಲ್ಲರಿಗೂ ತಲುಪಬೇಕಾದರೆ ಪುಸ್ತಕಗಳ ಪ್ರಕಟಣೆ ಬಹಳ ಮುಖ್ಯವಾಗಿದೆ. ಆ ಮೂಲಕ ಜನರಲ್ಲಿಓದುವ ಹವ್ಯಾಸ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿಕೊನೇಕ್ ಅವರು ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರ ಸಾಹಿತ್ಯಕ್ಕೆ ಉತ್ತಮ ಬೆಳಕು ಕೊಟ್ಟಿದ್ದಾರೆ ಎಂದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ.ಬಸವರಾಜ ಕೊನೇಕ್ , ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ, ಮಕ್ಕಳಿಗೆ ಮಾತೃ ಭಾಷೆಯ ಕಲಿಕೆ ಮುಖ್ಯ. ಆ ಮೂಲಕ ಕನ್ನಡದ ಅಭಿವೃದ್ಧಿ ಹೊಂದಲು ಸಾಧ್ಯ. ಓದುವ ಸಂಸ್ಕೃತಿ ಬೆಳೆಸಲು ನಾವು 1974ರಲ್ಲಿಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಹಾಕಿ ನಂತರ 2002ರಲ್ಲಿಪ್ರಕಾಶನ ಹುಟ್ಟು ಹಾಕಿರುವೆ. ಈ ಭಾಗದ ಯುವ ಬರಹಗಾರರಿಗೆ ಪ್ರೋತ್ಸಾಹಿಸಿ ಅವರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದೆ ಎಂದರು.

ಶಿವಲೀಲಾ ಕಲಗುರ್ಕಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಮುಡುಬಿ ಗುಂಡೇರಾವ, ಡಾ.ಶ್ರೀಶೈಲ್ ನಾಗರಾಳ, ಡಾ.ಚಿ.ಸಿ.ನಿಂಗಣ್ಣ, ಡಾ.ಗವಿಸಿದ್ದಪ್ಪ ಪಾಟೀಲ…, ಡಾ.ಜಯದೇವಿ ಗಾಯಕವಾಡ, ಅಮೃತಪ್ಪ ಅಣೂರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಮಹಾಲಿಂಗಯ್ಯ ಸ್ವಾಮಿ, ಪ್ರಭವ ಪಟ್ಟಣಕರ್ ಸೇರಿ ಅನೇಕರು ಇದ್ದರು.

*ಕೋಟ್ *

ಸಾಹಿತ್ಯದ ಬೆಳವಣಿಗೆಗೆ ಇಂದು ಪ್ರಕಾಶಕರ ಕೊಡುಗೆ ಅಮೋಘವಾಗಿದೆ. ನಾಡು ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ನಮಗೆ ತೃಪ್ತಿ ತಂದಿದೆ. ಪುಸ್ತಕ ಪ್ರಕಟಣೆಯಲ್ಲಿತೊಡಗಿಸಿಕೊಂಡಿರುವ ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ.

-ಡಾ.ಬಸವರಾಜ ಕೊನೇಕ್ , ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ