ಸಮಾಜದ ಪ್ರಗತಿಗೆ ಶಿಕ್ಷಣವೇ ಅಸ್ತ್ರವಿಕ ಸುದ್ದಿಲೋಕ ಬಳ್ಳಾರಿ
‘‘ಸಮಾಜದ ಪ್ರಗತಿ ಕೇವಲ ಆರ್ಥಿಕ ಅಭಿವೃದ್ಧಿಯಿಂದ ಸಾಧ್ಯವಿಲ್ಲ. ಶಿಕ್ಷಣ, ಸಾಮಾಜಿಕ ಜಾಗೃತಿ, ಸಂಘಟನೆ ಹಾಗೂ ಪರಸ್ಪರ ಸಹಕಾರದಿಂದ ಮಾತ್ರ ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿಮುನ್ನಡೆಯಲು ಸಾಧ್ಯ,’’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿನಡೆದ ರಾಜ್ಯ ಪಿಂಜಾರ್ /ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
‘‘ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಪ್ರತಿಯೊಂದು ಸಮಾಜವೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿಪಿಂಜಾರ್ /ನದಾಫ್ ಸಮಾಜದ ಮುಖಂಡರು ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನಹರಿಸಬೇಕು. ಸಮಾಜದ ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಂಕಲ್ಪ ಮಾಡಬೇಕು. ಯಾವುದೇ ಸಮಾಜದ ಅಭಿವೃದ್ಧಿಯಲ್ಲಿಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಪಡೆದ ಯುವಜನರು ಸಮಾಜದ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡುವಂತಾಗಬೇಕು,’’ ಎಂದು ಸಲಹೆ ನೀಡಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘‘ಪಿಂಜಾರ್ /ನದಾಫ್ ಸಮಾಜವನ್ನು ಪ್ರತಿನಿಧಿಸಿ ರಾಜಕೀಯ ಪ್ರತಿನಿಧಿಗಳು ಇಲ್ಲಎಂದು ಕೊರಗಬೇಡಿ, ನಾನೇ ನಿಮ್ಮ ಸಮಾಜದ ಪ್ರತಿನಿಧಿ ಎಂದು ಭಾವಿಸಿ. ನಾನು ನಿಮ್ಮ ಜೊತೆಗಿರುವೆ. ಪಿಂಜಾರ್ / ನದಾಫ್ ಸಮಾಜದ ಜತೆಗೆ ನನ್ನ ಬಾಂಧವ್ಯ ತುಂಬ ಹಳೆಯದು,’’ ಎಂದರು.
ಇದೇ ವೇಳೆ ಪಿಂಜಾರ್ ಸಂಘದ ಚಟುವಟಿಕೆಗಳಿಗಾಗಿ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಮ್ , ಪಾಲಿಕೆ ಮೇಯರ್ ಪಿ.ಗಾದೆಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ , ಸಂಘದ ರಾಜ್ಯಾಧ್ಯಕ್ಷ ಎಚ್ .ಜಲೀಲ್ ಸಾಬ್ , ಶರ್ಮಾಸ್ ಅಲಿ, ದಾದಾ ಖಲಂದರ್ , ವಲಿಸಾಬ್ , ಮೌಲಾಲಿ, ಅಮೀನಾಬೀ, ಮಸ್ತಾನ್ ವಲಿ, ಚಂದಾಸಾಬ್ , ನಜೀಸಾಬ್ ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
...............
09 ಮಾರುತಿ 03
ಬಳ್ಳಾರಿಯ ಮಹರ್ಷಿ ವಾಲ್ಮೀಕಿ ಭವನದಲ್ಲಿರಾಜ್ಯ ಪಿಂಜಾರ್ ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶವನ್ನು ಸಚಿವ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.