ಟಿ.ಎನ್ .ಕೋಟೆಯಲ್ಲಿನೀರಾವರಿ ಹೋರಾಟ ಸಮಾವೇಶ, ಹಸಿರು ಶಾಲು ದೀಕ್ಷೆ
---ಭದ್ರೆಗೆ 10,600 ಕೋಟಿ ಕೊಡಲು ರೈತರ ಒತ್ತಾಯ
ವಿಕ ಸುದ್ದಿಲೋಕ ಪರಶುರಾಂಪುರ
ಭದ್ರಾಮೇಲ್ದಂಡೆ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು 5300 ಕೋಟಿ ನೀಡಿ ರಾಷ್ಟ್ರೀಯ ಯೋಜನೆಗೆ ಒಳಪಡಿಸಿ ಇಡೀ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಜೆಟ್ ನಲ್ಲಿಘೋಷಿಸಿದಂತೆ ನಡೆಯದೆ ಮಾತಿಗೆ ತಪ್ಪಿದ್ದು, ಎಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದ್ದಾರೆ.
ಸಮೀಪದ ಟಿ.ಎನ್ .ಕೋಟೆ ಗ್ರಾಮದಲ್ಲಿಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡ ನೀರಾವರಿ ಹೋರಾಟ ಸಮಾವೇಶ, ಹಸಿರು ಶಾಲು ದೀಕ್ಷೆ ಹಾಗೂ ರೈತ ಸಂಘ ನೂತನ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.
ಕೃಷಿ ಈ ದೇಶದ ಶಕ್ತಿ. ಆದರೆ, ಇದನ್ನು ಯಾವ ಸರಕಾರಗಳು ಗಂಭೀರವಾಗಿ ಈವರೆಗೂ ಪರಿಗಣಿಸುತ್ತಿಲ್ಲ. ಬೆಂಬಲ ಬೆಲೆ ಬರೀ ನಾಟಕವಷ್ಟೆ. ಆತ್ಮಹತ್ಯೆ ನಿಲ್ಲಬೇಕು. ಸೂಕ್ಷ್ಮತೆ, ಮಾನವೀಯತೆ ಹೆಚ್ಚಬೇಕು. ಅಸಹಾಯಕನನ್ನಾಗಿಸಬಾರದು. ರಾಜಕಾರಣಿಗಳು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲಾರೈತ ಬಣಗಳು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಜಿಲ್ಲೆಸಂಪೂರ್ಣ ನೀರಾವರಿ ಘೋಷಿಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಮಂಡಲ ಪ್ರಧಾನರು ಹಾಗೂ ಹಿರಿಯ ರೈತಮುಖಂಡ ಗುರುಸ್ವಾಮಿ ಸಂಘದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಬರಗಾಲ ಕೇವಲ ಒಂದು ವರ್ಷವಲ್ಲ, ಅದರ ದುಷ್ಪರಿಣಾಮ ಮೂರು ವರ್ಷ ಇರುತ್ತದೆ. ಕೃಷಿಕರು, ಕೂಲಿಗಾರರು ನಿಷ್ಠೆ ಬೆಳೆಸಿಕೊಳ್ಳಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಮಾಡುವ ತನಕ ರೈತರ ಸಂಘಗಳು ಒಂದಾಗಿ ಬೀದಿಗಿಳಿದಾಗ ಮಾತ್ರ ಸರಕಾರ ಬೆದರುತ್ತದೆ ಎಂದರು.
ಹಸಿರು ಶಾಲು ದೀಕ್ಷೆ ನೀಡಿದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ದೇಶದ ಕೆಲವೇ ವ್ಯಕ್ತಿಗಳ ಕೈಲಿ ಸಂಪತ್ತು ಕೇಂದ್ರೀಕರಿಸಲಾಗಿದೆ. ನೀರು ನಮ್ಮ ಹಕ್ಕು ನೀರುಕೊಡುವ ತನಕ ಹೋರಾಡಬೇಕು ಎಂದರು.
ನರೇನಹಳ್ಳಿ ಅರುಣಕುಮಾರ್ , ಕೆ.ಸಿ.ಗೌಡ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಸವದಳ ರಾಜ್ಯಾಧ್ಯಕ್ಷ ವೀರೇಶ್ , ಜಾಫರ್ ಷರೀಫ್ , ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮತ್ತಿತರರು ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಮ ಶಾಖೆ ಅಧ್ಯಕ್ಷ ಚಂದ್ರಣ್ಣ ವಹಿಸಿದ್ದರು. ಕಾರ್ಯಕ್ರಮದ ಕೊನೇ ಗಳಿಗೆಯಲ್ಲಿತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರ ಮನವಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿರೈತ ಮುಖಂಡರಾದ ಕೆ.ಕರಿಯಣ್ಣ, ಚಂದ್ರಣ್ಣ, ಟಿ.ಚಂದ್ರಪ್ಪ, ರವಿಕುಮಾರ್ ಮರ್ಲಹಳ್ಳಿ, ಡಿ.ಸಿ.ನಾಗರಾಜ್ , ವೀರೇಶ್ , ನರೇನಹಳ್ಳಿ ಅರುಣಕುಮಾರ್ , ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಾಫರ್ ಷರೀಫ್ , ರಾಜಶೇಖರ್ ನಾಯ್ಕ, ಪ್ರಶಾಂತ ನಾಯಕ, ಜೋಗಿಮಟ್ಟಿ ಮಹೇಶಬಾಬು, ಹಿರೇಹಳ್ಳಿ ರಾಜಣ್ಣ, ಆರ್ .ರುದ್ರಮುನಿ, ಟಿ.ರಾಮಸ್ವಾಮಿ, ಮೀಸೆ ತಿಪ್ಪೇಸ್ವಾಮಿ ಮತ್ತಿತರೆ ನೂರಾರು ರೈತ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
----
ಕೋಟ್ //
ಬರಗಾಲ, ಬಡತನಕ್ಕೆ ಸರ್ಕಾರಗಳು ಕಾರಣ. ಸಂಸದರು ಬಾಯಿ ಬಿಡುತ್ತಿಲ್ಲ. ಧೈರ್ಯ ಪ್ರದರ್ಶಿಸಬೇಕು. 5,300 ಕೋಟಿ ಇಲ್ಲಿಯವರೆಗೆ ಕೊಟ್ಟಿಲ್ಲ. ವಿಳಂಬ ಮಾಡಿದ್ದರಿಂದ 10,600 ಕೋಟಿ ಕೊಡಬೇಕು
- ಕೆ.ಟಿ.ಶಿವಕುಮಾರ್ , ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ
----
9ಪಿಆರ್ ಎಂಪಿ1 ಪರಶುರಾಂಪುರ ಗ್ರಾಮದ ಸಮೀಪದ ಟಿ.ಎನ್ .ಕೋಟೆ ಗ್ರಾಮದಲ್ಲಿಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡ ನೀರಾವರಿ ಹೋರಾಟ ಸಮಾವೇಶ, ಹಸಿರು ಶಾಲು ದೀಕ್ಷೆ ಹಾಗೂ ರೈತ ಸಂಘ ನೂತನ ಗ್ರಾಮ ಶಾಖೆ ಚಿಂತಕ ಜೆ.ಯಾದವರೆಡ್ಡಿ ಉದ್ಘಾಟಿಸಿದರು.