ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಧ್ವಜ ಚೀಟಿ ಬಿಡುಗಡೆ
ವಿಕ ಸುದ್ದಿಲೋಕ ಕುಶಾಲನಗರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಪುರಸಭಾ ಕಚೇರಿ ಆವರಣದಲ್ಲಿಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳೊಂದಿಗೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ಸೋಮಪ್ಪ ದೇವರಗುಂಡ ಮಾತನಾಡಿ,‘‘ಭಾರತದಲ್ಲಿಚದುರಿದ್ದ ವಿವಿಧ ಸ್ಕೌಟಿಂಗ್ ಮತ್ತು ಗೈಡಿಂಗ್ ಸಂಸ್ಥೆಗಳು 1950ರ ನ.7ರಂದು ಒಗ್ಗೂಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ’ ಏಕೀಕೃತ ಸಂಸ್ಥೆ ಅಸ್ತಿತ್ವಕ್ಕೆ ಬಂದ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಿದ್ಧರಾಗಿ- ಸದಾ ಸಿದ್ಧರಾಗಿ ಎಂಬ ಸಂಕಲ್ಪದೊಂದಿಗೆ ಯಾವುದೇ ತುರ್ತು ಸಂದರ್ಭದಲ್ಲೂಯಾವುದೇ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ ಹೊಂದಬೇಕು,’’ಎಂದು ಕರೆ ನೀಡಿದರು.
ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ,‘‘ಸ್ಕೌಟ್ಸ್ ಮತ್ತು ಗೈಡ್ಸ್ ಆಂದೋಲನವು ಮಕ್ಕಳಲ್ಲಿಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಂಯಮ, ಸೇವಾ ಮನೋಭಾವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿಪ್ರಮುಖ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಷ್ಟದ ಸಮಯ ಬಂದರೂ ಧೃತಿಗೆಡದೆ ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು,’’ಎಂದು ಹೇಳಿದರು.
ಜಿಲ್ಲಾಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ ಮಾತನಾಡಿ,‘‘ಪ್ರತಿವರ್ಷ ನ.7ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಈ ದಿನವನ್ನು ಆಚರಿಸಲಾಗುತ್ತಿದೆ,’’ ಎಂದರು.
ಸ್ಕೌಟ್ಸ್ , ಗೈಡ್ಸ್ ನ ಕೊಡಗು ಜಿಲ್ಲಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್ , ಅಂಜೆಲಾ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಡಿಸೋಜ, ಸ್ಕೌಟ್ಸ್ , ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್ .ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್ .ಗಣೇಶ್ , ಕೋಶಾಧಿಕಾರಿ ಎನ್ .ಎಸ್ .ನರೇಶ್ , ಸಂಸ್ಥೆಯ ಪದಾಧಿಕಾರಿಗಳಾದ ಇಂದಿರಾ ಮುತ್ತಣ್ಣ, ಕೆ.ಬಿ.ಗಣೇಶ್ , ಡಿ.ವಿ.ಗಣೇಶ್ , ಎಂ.ಎಸ್ .ಮಹೇಂದ್ರ, ರಾಧಾ, ಪುರಸಭೆಯ ಸಮುದಾಯ ಸಂಚಾಲಕಿ ಆಲಿಯಾಬಾನು, ಕಿರಿಯ ಆರೋಗ್ಯ ನಿರೀಕ್ಷಕಿ ನಿಶಾ, ಸಮುದಾಯ ಸಂಚಾಲಕಿ ಅನುಷ, ಸ್ಯಾನಿಟರಿ ಸೂಪರ್ ವೈಸರ್ ಮೋಹನ್ ಕುಮಾರ್ , ಸಿಬ್ಬಂದಿ ದಿವ್ಯ , ಶಾಲಾ ಶಿಕ್ಷಕಿಯರಾದ ಬಿ.ಎನ್ .ರೇಖಾ , ಭವ್ಯ, ಪಲ್ಲವಿ,ಅನುಷಾ ಮತ್ತಿತರರು ಹಾಜರಿದ್ದರು.
07 ಕೆಯುಎಸ್ 04 ಚಿತ್ರದಲ್ಲಿ
ಭಾರತ್ ಸ್ಕೌಟ್ಸ್ , ಗೈಡ್ಸ್ ನ ಸಂಸ್ಥಾಪನಾ ದಿನದ ಅಂಗವಾಗಿ ಕುಶಾಲನಗರದಲ್ಲಿಪುರಸಭೆ ಆವರಣದಲ್ಲಿಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಧ್ವಜ ಚೀಟಿ ಬಿಡುಗಡೆ ಮಾಡಿದರು.