ವಿಕ ಸುದ್ದಿಲೋಕ ವಿಟ್ಲಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮೆರೆದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕೃತಿ ಎನ್ .ಪಿ., ದೀಪಿತ್ ಶೆಟ್ಟಿ ಹಾಗೂ ನಿಶ್ಚಿತ್ ಪಿ.ಡಿ. ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ, ಮೆರವಣಿಗೆಯ ಮೂಲಕ ಶಾಲೆಗೆ ಬರಮಾಡಿಕೊಳ್ಳುವ ಅಪೂರ್ವ ಕಾರ್ಯಕ್ರಮ ಮಾಣಿಯಲ್ಲಿಶನಿವಾರ ನಡೆಯಿತು.
ಮಾಣಿ ಜಂಕ್ಷನ್ ನಲ್ಲಿವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಾಧಕ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು. ಅಡ್ಲಬೆಟ್ಟು ಬುಡೋಳಿಯ ಸತ್ಯಶ್ರೀ ಗೆಳೆಯರ ಬಳಗ, ಮಾಣಿ ವಾಲಿಬಾಲ್ ಫ್ರೆಂಡ್ಸ್ - ಬಾಲವಿಕಾಸ ಮಾಣಿ, ಬಂಟ್ವಾಳ ತಾಲೂಕು ನಿವೃತ್ತ ಸೈನಿಕರ ಸಂಘ , ಮಾಣಿ ಯುವಕ ಮಂಡಲ, ಯುವವಾಹಿನಿ ಮಾಣಿ ಘಟಕ, ಮಾಣಿ ಬಂಟರ ಸಂಘ ಹಾಗೂ ಬಾಲ ವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕೃತಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ನಿವೃತ್ತ ಸೈನಿಕ ದಿನೇಶ್ ಬಿ. ಮತ್ತು ತೇಜಾಕ್ಷಿ ದಂಪತಿಯ ಪುತ್ರಿ ಕೃತಿ ಎನ್ .ಪಿ. ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ನವೆಂಬರ್ 19ರಿಂದ 24ರವರೆಗೆ ಮಧ್ಯಪ್ರದೇಶದಲ್ಲಿನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಸುಚಿತ್ರಾ ದಂಪತಿ ಪುತ್ರ ದೀಪಿತ್ ಶೆಟ್ಟಿ ಹಾಗೂ ಪ್ರಗತಿಪರ ಕೃಷಿಕ ಪೂವಪ್ಪ ಪೂಜಾರಿ ಮತ್ತು ರಾಜೇಶ್ವರಿ ದಂಪತಿಯ ಪುತ್ರ ನಿಶ್ಚಿತ್ ಪಿ.ಡಿ. 4*400 ಮೀಟರ್ ರಿಲೇ ಓಟದಲ್ಲಿಚಿನ್ನದ ಪದಕ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಹ್ಲಾದ್ ಜೆ. ಶೆಟ್ಟಿ, ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಸುಪ್ರಿಯಾ ಡಿ., ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ಹಾಗೂ ಸೌಮ್ಯ ಸದಾನಂದ್ ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.
ತೆರೆದ ಜೀಪಿನಲ್ಲಿಮೆರವಣಿಗೆ
ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ ಮೂಲಕ ಬಾಲ ವಿಕಾಸ ಶಾಲೆಯ ಬ್ಯಾಂಡ್ ತಂಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಮೆರುಗು ನೀಡಿದರು.
0911ವಿಟಿಎಲ್ ಮಾಣಿ ಬಾಲವಿಕಾಸ
ತೆರೆದ ಜೀಪಿನಲ್ಲಿಸಾಧಕ ವಿದ್ಯಾರ್ಥಿಗಳ ಮೆರವಣಿ ಮಾಡಲಾಯಿತು.