ಮೇಷ : ಚರ್ಮ ಸಂಬಂಧಿ ಕಾಯಿಲೆಗಳನ್ನು ಪರಿಹರಿಸಿಕೊಳ್ಳಲು ಹೊಸ ಔಷಧಿಗಳ ಪ್ರಯೋಗ ಬೇಡ. ಸಾಂಸಾರಿಕ ವಿಷಯದಲ್ಲಿಗುರು ಹಿರಿಯರ ಮಾತು ಮೀರದಿರಿ. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು ದೊರೆಯಲಿವೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಗುಲಾಬಿ)
-------------
ವೃಷಭ : ರಾಜಕೀಯ ಚಟುವಟಿಕೆಗಳಲ್ಲಿಬಿರುಸಿನ ಓಡಾಟ ಇರಲಿದೆ. ಖರ್ಚು-ವೆಚ್ಚಗಳಲ್ಲಿಮಿತವ್ಯಯ ಸಾಧಿಸಲು ಪ್ರಯತ್ನಿಸುವಿರಿ. ಕಠಿಣ ಪ್ರಯತ್ನಗಳು ಫಲಕಾರಿಯಾಗಲಿವೆ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ)
-----------
ಮಿಥುನ : ನಾನಾ ರೀತಿಯಲ್ಲಿಹಣವು ಕೈ ಸೇರಲಿದೆ. ಬಂಧು-ಮಿತ್ರರಿಂದ ಉತ್ತಮ ಸಹಕಾರ ಸಿಗಲಿದೆ. ಗಣ್ಯ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿಸ್ಥಾನಮಾನ ದೊರೆಯಲಿದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಪಾಚಿ ಹಸಿರು)
-------------
ಕಟಕ : ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ಎಲ್ಲಾವಿಷಯಗಳನ್ನು ಸಮಗ್ರವಾಗಿ ಅವಲೋಕಿಸಲು ಉತ್ತಮ ದಿನ. ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ವಾಮಮಾರ್ಗದ ಪ್ರಯತ್ನ ಮಾಡಬೇಡಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಖಾಕಿ)
-----------
ಸಿಂಹ : ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿಚೇತರಿಕೆ ಕಂಡುಬರುತ್ತದೆ. ಇತರರಿಗೆ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿಕೊಳ್ಳಿ. ಮನೆಯ ಹೊರಗಿನ ಆಹಾರ ಸೇವನೆ ಬೇಡ.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಹಳದಿ)
------------------------
ಕನ್ಯಾ : ಪಾರಂಪರಾಗತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡುವ ಯೋಚನೆಯನ್ನು ಕೈಬಿಡಿ. ಆರಂಭವಾಗಿದ್ದ ಹೊಸ ಕೆಲಸಗಳು ನಿಲ್ಲುವ ಸೂಚನೆಗಳಿವೆ. ಕೆಲವರಿಗೆ ಹಿರಿಯರ ಒಡವೆಗಳು ದೊರೆಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಯೋಗವಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಸಿರು)
---------------
ತುಲಾ : ಸಕಾರಾತ್ಮಕ ದೃಷ್ಟಿಕೋನದಿಂದ ನೆಮ್ಮದಿಯ ದಿನವಾಗಿರುತ್ತದೆ. ಸಾಗರ ಜಲಾಶಯ, ಜಲಪಾತ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ. ಬಳೆ ವ್ಯಾಪಾರಿಗಳಿಗೆ ಉತ್ತಮ ಲಾಭ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಗಾಢಕೆಂಪು)
-------------
ವೃಶ್ಚಿಕ : ಸಂಘಟನಾ ಶಕ್ತಿಯಿಂದ ವ್ಯವಹಾರದಲ್ಲಿಲಾಭವಾಗಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿಆಲಸ್ಯ ತೋರಿ ಬರುವುದು. ಉದ್ಯೋಗದ ನಿರೀಕ್ಷೆಯಲ್ಲಿರುವವರು ಉತ್ತಮ ಸಮಾಚಾರವನ್ನು ಕೇಳುವಿರಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)
-----------
ಧನು : ನ್ಯಾಯಾಲಯದ ಮೆಟ್ಟಿಲು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ. ದಿನಾಂತ್ಯದಲ್ಲಿಆಶ್ಚರ್ಯಕರ ಸುದ್ದಿ ಕೇಳುವಿರಿ. ಆಪ್ತರ ಸಕಾಲಿಕ ಸಹಾಯಕ್ಕೆ ಧನ್ಯವಾದ ತಿಳಿಸಲು ಮರೆಯದಿರಿ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕಪ್ಪು)
------------
ಮಕರ :ಮಗನ ವಿದ್ಯಾಭ್ಯಾಸದಲ್ಲಿಅಡೆತಡೆಗಳು ಇದ್ದರೂ ಪ್ರಗತಿಗೆ ಕೊರತೆ ಆಗದು. ಶಿಕ್ಷಕ ವರ್ಗದವರಿಗೆ ಅನುಕೂಲಕರ ದಿನವಾಗಲಿದೆ. ಸರಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಓಡಾಡುವ ಸಂದರ್ಭ ಎದುರಾಗಲಿದೆ.
(ಶುಭ ಸಂಖ್ಯೆ 3, ಅದೃಷ್ಟ ಬಣ್ಣ : ಸುವರ್ಣ)
----------
ಕುಂಭ : ವೃದ್ದರು ಮತ್ತು ಅಶಕ್ತರನ್ನು ಗೌರವದಿಂದ ಕಾಣುವ ಸ್ವಭಾವದಿಂದಾಗಿ ಉಳಿದವರಲ್ಲಿನಿಮ್ಮ ಬಗ್ಗೆ ಗೌರವ ಹುಟ್ಟಲಿದೆ. ಮಾಡುವ ಕೆಲಸವು ಉತ್ತಮವಾಗಿ ಮತ್ತು ಸರಾಗವಾಗಿ ನಡೆಯಲಿದೆ.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಕೆಂಪು)
----
ಮೀನ : ಸಣ್ಣ ಕೈಗಾರಿಕೆಯನ್ನು ನಡೆಸುತ್ತಿರುವವರು ನೂತನ ಘಟಕಗಳನ್ನು ಆರಂಭಿಸಬಹುದು. ಪ್ರವೃತ್ತಿಯ ಕಾರ್ಯಗಳಿಂದ ವೃತ್ತಿಯ ಕಾರ್ಯದ ವೇಗ, ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಸ್ಥಿರಾಸ್ತಿ ಖರೀದಿಗೆ ಮಾತುಕತೆ ನಡೆಯಲಿದೆ.