ಪ್ರಮುಖ - ಕೋಳಿ ಸಾಕಣೆದಾರರಿಂದ ನ.25ರಂದು ವಿಧಾನಸೌಧ ಚಲೋ

Contributed by: manjuvkpresssdl@gmail.com|Vijaya Karnataka•
poultry farmers protest at vidhana soudha on 25th about 15000 expected to participate
ಪ್ರತಿ ಕೆಜಿ ಕೋಳಿ ಸಾಕಣೆಗೆ ನಿರ್ವಹಣೆ ವೆಚ್ಚ 20 ರೂ. ನೀಡಬೇಕು: ಮುನೇಗೌಡ ಆಗ್ರಹ

ವಿಕ ಸುದ್ದಿಲೋಕ ಶಿಡ್ಲಘಟ್ಟ
ಕೋಳಿ ಸಾಕಣೆದಾರರಿಗೆ ಪ್ರತಿ ಕೆಜಿ ಕೋಳಿ ಸಾಕಣೆ ವೆಚ್ಚ 20 ರೂ. ನೀಡಬೇಕು ಎಂದು ಆಗ್ರಹಿಸಿ ನ.25ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಕೋಳಿ ಸಾಕಣೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಮಳಮಾಚನಹಳ್ಳಿ ಮುನೇಗೌಡ ತಿಳಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನ.25ರಂದು ಫ್ರೀಡಂ ಪಾರ್ಕ್ನಲ್ಲಿರಾಜ್ಯ ಕೋಳಿ ಸಾಕಣೆದಾರರ ಸಂಘದಿಂದ ನಡೆಯುವ ಪ್ರತಿಭಟನೆ ಹಿನ್ನೆಲೆಯಲ್ಲಿನಗರದ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿಶನಿವಾರ ನಡೆದ ತಾಲೂಕು ಕೋಳಿ ಸಾಕಣೆದಾರರ ಸಂಘದ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು.

ಕಂಪನಿಗಳು 2021ರಲ್ಲಿರೈತರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಫಾರಂ ಕೋಳಿ ಸಾಕಣೆದಾರರಿಗೆ ಪ್ರತಿ ಕೆಜಿ ಕೋಳಿಗೆ 6.20 ರೂ. ನೀಡುವುದು ಮತ್ತು ಪ್ರತಿ ವರ್ಷ 50 ಪೈಸೆ ಹೆಚ್ಚಿಸುವುದಾಗಿ ಒಪ್ಪಂದವಾಗಿತ್ತು. ನಂತರ 2025ರಲ್ಲಿಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಂಪನಿಗಳ ಹಾಗೂ ಕೋಳಿ ಸಾಕಣೆದಾರ ರೈತರ ಸಭೆ ನಡೆಸಿ ಪ್ರತಿ ಕೆಜಿ ಕೋಳಿ ಸಾಕಣೆಗೆ 10 ರೂ. ನೀಡುವಂತೆ ಸೂಚಿಸಿದ್ದಾರೆ.

ಆದರೆ ಇದುವರೆಗೂ ಕಂಪನಿ ಹೇಳಿದಂತೆ 6.20 ರೂ. ಮಾತ್ರ ನೀಡುತ್ತಿದ್ದು, ಪ್ರತಿ ವರ್ಷ ಹೆಚ್ಚಿಸಬೇಕಾದ 50 ಪೈಸೆ ನೀಡುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿನಡೆದ ಸಭೆಯಲ್ಲಿನಿರ್ಧರಿಸಿದಂತೆ 10 ರೂ. ನೀಡುತ್ತಿಲ್ಲಎಂದು ದೂರಿದರು.

ಎಲ್ಲಬೆಲೆಗಳು ಹೆಚ್ಚುತ್ತಿದ್ದು ಕೋಳಿ ನಿರ್ವಹಣೆಯ ವೆಚವ್ಚೂ ಹೆಚ್ಚಿದೆ. ಆದರೆ ಕೋಳಿ ನಿರ್ವಹಣೆಗೆ ನೀಡಬೇಕಾದ ಬೆಲೆ ಮಾತ್ರ ಹೆಚ್ಚಿಸಿಲ್ಲ, ಒಪ್ಪಂದಂತೆ ಕಂಪನಿಗಳು ನಡೆದುಕೊಳ್ಳುತ್ತಿಲ್ಲ. ಹಾಗಾಗಿ ಕಂಪನಿಗಳು ಕೋಳಿ ಸಾಕಣೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡಂತೆ ಹೆಚ್ಚುವರಿ ಹಣ ನೀಡಬೇಕು. ಜತೆಗೆ ನಿರ್ವಹಣೆ ವೆಚ್ಚ ಹೆಚ್ಚಿದ ಕಾರಣ ಪ್ರತಿ ಕೆಜಿ ಕೋಳಿ ಸಾಕಣೆಗೆ 20 ರೂ. ನೀಡಬೇಕು ಎಂದು ಒತ್ತಾಯಿಸಿದರು.

ಇಲ್ಲವಾದಲ್ಲಿನ.25ರಂದು ರಾಜ್ಯದ ಎಲ್ಲ15 ಸಾವಿರ ಕೋಳಿ ಸಾಕಣೆದಾರರು ವಿಧಾನಸೌಧ ಚಲೋದಲ್ಲಿಭಾಗವಹಿಸಲಿದ್ದೇವೆ. ಈ ಹೋರಾಟದಲ್ಲಿಎಲ್ಲಕೋಳಿ ಸಾಕಣೆದಾರರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

ಸಂಘದ ಗೌರವಾಧ್ಯಕ್ಷ ಡಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ಎ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಬಿ. ವೆಂಕಟೇಶ್ , ಕಾರ್ಯಾಧ್ಯಕ್ಷ ಹುಣಸೇನಹಳ್ಳಿ ಮುನಿಯಪ್ಪ, ಕಾರ್ಯದರ್ಶಿ ಶಿವಾಜಿ, ಖಜಾಂಚಿ ಕೋಟಹಳ್ಳಿ ಶ್ರೀನಿವಾಸ್ , ನಿರ್ದೇಶಕರಾದ ಎಂ.ಸಿ. ಜಗದೀಶ್ , ಎಂ.ಎಲ್ . ಮುನೇಗೌಡ, ಉಮಾಶಂಕರ್ , ಬಿ.ಎಸ್ . ಮುನೇಗೌಡ, ಮಜುನಾಥ್ , ಶ್ರೀನಿವಾಸ್ , ಬೈರೇಗೌಡ, ವಿಜಯ್ ಕುಮಾರ್ , ಆಂಜಿನಪ್ಪ, ಬೋದಗೂರು ನಾಗೇಶ್ ಕುಮಾರ್ , ಚಂದ್ರಶೇಖರ್ ಹಾಜರಿದ್ದರು.

7ಎಸ್ ಡಿಎಲ್ 1

ಶಿಡ್ಲಘಟ್ಟದ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿತಾಲೂಕಿನ ಕೋಳಿಸಾಕಣೆದಾರರ ಸಭೆ ನಡೆಯಿತು.