ಶಿಂಷಾ ಏತ ನೀರಾವರಿ ಯೋಜನೆ ಮೂಲಕ ಭರ್ತಿಯಾದ ಕೆರೆಗೆ ಬಾಗಿನ

Contributed by: www.hvprasanna@gmail.com|Vijaya Karnataka•
shinsha aeta irrigation scheme brings water to bhadrayya lake and tavare lake massive offering made
ಶಿಂಷಾ ಏತ ನೀರಾವರಿ ಯೋಜನೆ ಮೂಲಕ ಭರ್ತಿಯಾದ ಕೆರೆಗೆ ಬಾಗಿನ

ವಿಕ ಸುದ್ದಿಲೋಕ ಸಾತನೂರು : ಶಿಂಷಾ ಏತ ನೀರಾವರಿ ಯೋಜನೆ ಮೂಲಕ ಭರ್ತಿಯಾದ ಹೊಸಕಬ್ಬಾಳು ಗ್ರಾಮದ ಭದ್ರಯ್ಯನಕೆರೆ ಮತ್ತು ತಾವರೆಕೆರೆಗೆ ಗ್ರಾಮಸ್ಥರು
ಜಿಪಂ ಮಾಜಿ ಸದಸ್ಯ ಶಂಕರ್ ನೇತೃತ್ವದಲ್ಲಿಬಾಗಿನ ಅರ್ಪಿಸಿದರು.

ಕೆರೆಗಳಲ್ಲಿನೀರಿಲ್ಲದೆ ಹೋದರೆ ಮುಂಬರುವ ಬೇಸಿಗೆಯಲ್ಲಿಜಾನುವಾರುಗಳಿಗೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ‘ವಿಕ’ ವರದಿ ಪ್ರಕಟಿಸಿತ್ತು.

ಇಗ್ಗಲೂರು ಜಲಾಶಯ ಸಮೀಪದ ಅಂಕನಹಳ್ಳಿ ಬಳಿ ದೊಡ್ಡ ಪ್ರಮಾಣದ ಮೋಟಾರ್ ಗಳನ್ನು ಅಳವಡಿಸಿ ಏತ ನೀರಾವರಿ ಯೋಜನೆ ಮೂಲಕ ಕಂಚನಹಳ್ಳಿ ಕೆರೆ ತುಂಬಿಸಿ,

ನಂತರ ಕಬ್ಬಾಳು ಗ್ರಾಮದ ಬಾಳೆಕಟ್ಟೆಕೆರೆ ಭರ್ತಿಯಾದ ಮೇಲೆ ಹೊಸ ಕಬ್ಬಾಳು ಗ್ರಾಮದ ಭದ್ರಯ್ಯನಕೆರೆ ಹಾಗೂ ತಾವರೆಕೆರೆಗೆ ನೀರು ತುಂಬಿಸಲಾಗಿದೆ.

ಈ ಕೆರೆಗಳು ಕೋಡಿ ಬಿದ್ದು ಅಲ್ಲಿಂದ ಕಬ್ಬಾಳು ಗ್ರಾಮದ ದೊಂಕನಕೆರೆಗೆ ನೀರನ್ನು ತುಂಬಿಸಲಾಗುತ್ತಿದೆ. ಆದ್ದರಿಂದ ಸಾತನೂರು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಶಂಕರ್ ಮತ್ತು ಗ್ರಾಮಸ್ಥರು ತುಂಬಿದ ಕೆರೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಜಿಪಂ ಮಾಜಿ ಸದಸ್ಯ ಶಂಕರ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ನೀರಾವರಿ ಯೋಜನೆ ದೃಷ್ಟಿಯಿಂದ ಅವರ ಕೊಡುಗೆಗಳಿಂದ ನಮ್ಮ ಸಾತನೂರು ಹೋಬಳಿ ಮತ್ತು ಕೈಲಾಂಚ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ನೀರನ್ನು ತುಂಬಿಸಲಾಗಿದೆ. ಇದರಿಂದ ಹೈನುಗಾರಿಕೆ ರೈತರಿಗೆ ಹಾಗೂ ಬರಗಾಲವಿದ್ದರೂ ಕೆರೆಗಳಿಗೆ ನೀರು ತುಂಬಿಸುವುದರಿಂದ ಮುಂಬರುವ ಬೇಸಿಗೆ ಕಾಲಕ್ಕೆ ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈ ಕೆರೆಗಳು ಭರ್ತಿಯಾಗಿರುವುದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.

ಹೊಸ ಕಬ್ಬಾಳು ಗ್ರಾಮದ ಮುಖಂಡರಾದ ಎಳೆಮುಗಣ್ಣ, ಅಶ್ವತ್ , ಕಬ್ಬಾಳು ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಾದ ನಾಗೇಶ್ , ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ . ಎಚ್ .ವಿ. ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪುರುಷೋತ್ತಮ್ , ಸ್ವಾಮಿ, ಶಿವಸ್ವಾಮಿ, ಶರತ್ , ಬಸವೇಶ್ವರ ಸ್ವಾಮಿ ಅರ್ಚಕರಾದ ಶಿವರುದ್ರ, ಗಿರೀಶ್ ಸೇರಿದಂತೆ ಹೊಸ ಕಬ್ಬಾಳು ಗ್ರಾಮಸ್ಥರು ಮತ್ತು ರೈತರು ಹಾಜರಿದ್ದರು.

-----------

09 ಸಾತನೂರು 1: ಶಿಂಷಾ ಏತ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಹೊಸ ಕಬ್ಬಾಳು ಗ್ರಾಮದ ಭದ್ರಯ್ಯನಕೆರೆ, ತಾವರೆಕೆರೆ ಭರ್ತಿಯಾಗಿದ್ದು, ಮಾಜಿ ಜಿಲ್ಲಾಪಂಚಾಯತಿ ಸದಸ್ಯನಾದ ಶಂಕರ್ ಮತ್ತು ಗ್ರಾಮಸ್ಥರು ಭರ್ತಿಯಾಗಿ ಕೋಡಿ ಬಿದ್ದ ಕೆರೆಗಳಿಗೆ ಪೂಜೆ ಸಲ್ಲಿಸಿ ಬಾಗಿನವನ್ನು ಅರ್ಪಿಸಿದರು.