7.94 ಕೋಟಿ ಹಣದೊಂದಿಗೆ ಮಹಿಳೆ ಪರಾರಿ!

Contributed by: ravi.gosavi@timesofindia.com|Vijaya Karnataka•
woman absconds with 794 crore money a thrilling criminal drama
- ರೇಷನ್ , ಗೃಹ ಉದ್ಯೋಗ ಆಮಿಷವೊಡ್ಡಿ 662 ಮಹಿಳೆಯರಿಗೆ ವಂಚನೆ

ವಿಕ ಸುದ್ದಿಲೋಕ ಬೆಳಗಾವಿ
ಟ್ರಸ್ಟ್ ನಲ್ಲಿಸದಸ್ಯತ್ವ ಪಡೆದರೆ ಮೂರು ತಿಂಗಳಿಗೊಮ್ಮೆ ಉಚಿತ ರೇಷನ್ ನೀಡುವುದಲ್ಲದೇ, ಟೇಲರಿಂಗ್ , ಬ್ಯಾಗ್ ತಯಾರಿಕೆ ಗೃಹ ಉದ್ಯೋಗ ನೀಡುವುದಾಗಿ ನಂಬಿಸಿ 662 ಮಹಿಳೆಯರಿಂದ 7.94 ಕೋಟಿ ರೂ. ಸಂಗ್ರಹಿಸಿ ಮೋಸ ಮಾಡಿದ ಘಟನೆ ಬೆಳಕಿದೆ ಬಂದಿದೆ.

ಬೆಂಗಳೂರು ಮೂಲದ ಸಫೀನಾ ಜೋಸೆಫ್ ವಿರುದ್ಧ ಖಾನಾಪುರ ತಾಲೂಕಿನ ಮನಸಾಪುರದ ಇಸ್ಪೋಲಿನಾ ಅಲ್ಮೀದಾ ಎಂಬುವವರು ದೂರು ನೀಡಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿದಾಖಲಾದ ದೂರಿನ ಆಧಾರದ ಮೇಲೆ ಪ್ರಕರಣವನ್ನು ತಿಲಕವಾಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಖಾನಾಪುರ ಸಿಡಿಪಿಒ ಕಚೇರಿಯಲ್ಲಿಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿದ್ದ ಇಸ್ಪೋಲಿನಾ ಅವರಿಗೆ ಸಫೀನಾ ಪರಿಚಯವಾಗಿದ್ದಳು. ತನ್ನ ಟ್ರಸ್ಟ್ ನಲ್ಲಿ1,200 ರೂ.ಪಾವತಿಸಿ ಸದಸ್ಯತ್ವ ಪಡೆದ ಮಹಿಳೆಯರಿಗೆ ಟೇಲರಿಂಗ್ ಹಾಗೂ ಬ್ಯಾಗ್ ತಯಾರಿಕೆಯ ಗೃಹ ಉದ್ಯೋಗ ಮತ್ತು ಮೂರು ತಿಂಗಳಿಗೊಮ್ಮೆ ಉಚಿತ ರೇಷನ್ ನೀಡುವುದಾಗಿ ಸಫೀನಾ ಭರವಸೆ ನೀಡಿದ್ದಳು.

ಇದನ್ನು ನಂಬಿದ ಇಸ್ಪೋಲಿನಾ ತಮ್ಮ ಪರಿಚಯದ 662 ಮಹಿಳೆಯರನ್ನು ಟ್ರಸ್ಟ್ ನ ಸದಸ್ಯರನ್ನಾಗಿ ಮಾಡಿಸಿದ್ದರು. ಅವರಿಂದ ಒಟ್ಟು 7,94,400 ರೂ. ಸಂಗ್ರಹಿಸಲಾಗಿತ್ತು. ಆದರೆ, ಭರವಸೆಯಂತೆ ಉದ್ಯೋಗ ಅಥವಾ ರೇಷನ್ ಏನನ್ನೂ ನೀಡದೆ ಸಫಿನಾ ಕಚೇರಿ ಬಂದ್ ಮಾಡಿ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿಆರೋಪಿಸಲಾಗಿದೆ.