ಇಂದಿನ ಸಮಾಜದಲ್ಲಿಬದಲಾವಣೆ ತರುವ ಶಕ್ತಿ ಯುವಜನರ ಕೈಯಲ್ಲಿದೆ. ಯುವಜನರು ತಮ್ಮ ಸಾಮಾಜಿಕ ಹೊಣೆಗಾರಿಕೆ ಅರಿತು ಸಮಾಜದಲ್ಲಿನಡೆಯುವ ಅನ್ಯಾಯ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಪರಿಸರ ನಾಶ, ಜಾತೀಯತೆ ಹಾಗೂ ಅಸಮಾನತೆ ವಿರುದ್ಧ ಧ್ವನಿ ಎತ್ತಬೇಕು. ಈ ಕುರಿತ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಳ್ಳುವುದಕ್ಕೆ ಸೀಮಿತವಾಗಬಾರದು. ರಕ್ತದಾನ, ಸ್ವಚ್ಛತಾ ಅಭಿಯಾನ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ವೃದ್ಧರು ಮತ್ತು ಅಶಕ್ತರಿಗೆ ಸಹಾಯ, ಪರಿಸರ ಸಂರಕ್ಷಣೆ ಹಾಗೂ ರಸ್ತೆ ಸುರಕ್ಷತೆಯಂತಹ ಕಾರ್ಯಗಳಲ್ಲಿಯುವಕರು ಭಾಗವಹಿಸಬೇಕು. ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡದೆ, ಸತ್ಯಾಸತ್ಯತೆ ಪರಿಶೀಲಿಸಿ ನಡೆಯುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ, ಭೇದ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ಸಾಮಾಜಿಕ ಬದಲಾವಣೆಯನ್ನು ಬೇರೆಯವರಿಂದ ನಿರೀಕ್ಷಿಸುವ ಬದಲು ನಾವೇ ಬದಲಾವಣೆಯ ಭಾಗವಾಗಬೇಕೆಂಬ ಮನೋಭಾವ ಯುವಜನರಲ್ಲಿಮೂಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.- ಎಚ್ .ಪಿ.ಶ್ರೇಯಾ, ಪ್ರಥಮ ಪಿಯುಸಿ. ಬಿಜಿಎಸ್ ವಿಎಸ್ ಪಿಯು ಕಾಲೇಜು, ಮೂಡಿಗೆರೆ.