ಎಲ್ ಒಸಿಯಲ್ಲಿ ಆ್ಯಂಟಿ ಡ್ರೋನ್ ಯೂನಿಟ್ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯ (ಎಲ್ ಒಸಿ) ಉದ್ದಕ್ಕೂ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿಆ್ಯಂಟಿ ಡ್ರೋನ್ ಯೂನಿಟ್ ಗಳನ್ನು ನಿಯೋಜಿಸಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿಪಾಕಿಸ್ತಾನ ಉಗ್ರರು ನಡೆಸಿದ ನರಮೇಧಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ನೀಡಿದ ತಿರುಗೇಟಿಗೆ ನಡುಗಿಹೋದ ಪಾಕಿಸ್ತಾನ ಈಗ ಗಡಿ ಭಾಗದಲ್ಲಿಆ್ಯಂಟಿ ಡ್ರೋನ್ ಯೂನಿಟ್ ಗಳನ್ನು ನಿಯೋಜಿಸುತ್ತಿದೆ. ಜಮ್ಮು-ಕಾಶ್ಮೀರದ ಪೂಂಚ್ , ರಜೌರಿ ಮತ್ತು ನೌಶೇರಾ ಗಡಿಗೆ ಮುಖಮಾಡಿ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್ ಕೋಟ್ , ಕೋಟ್ಲಿಮತ್ತು ಭಿಂಭರ್ ವಲಯಗಳಲ್ಲಿಈ ಆ್ಯಂಟಿ ಡ್ರೋನ್ ಯೂನಿಟ್ ಗಳನ್ನು ನಿಯೋಜಿಸಿದೆ. ಪಾಕಿಸ್ತಾನವು ಈಗಾಗಲೇ ಚೀನಾದಿಂದ ಎಚ್ ಕ್ಯೂ-17 ಎಇ ಸಣ್ಣ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯನ್ನು ಹಾಗೂ ಟರ್ಕಿಯಿಂದ ಕಾರ್ಕುಟ್ ಆ್ಯಂಟಿ ಏರ್ ಕ್ರಾಫ್ಟ್ ಗನ್ ಮತು ಅಹಿನ್ ಕೌಂಟರ್ ಡ್ರೋನ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿಖರೀದಿಸಿದೆ. ಭಾರತವು ಕೂಡ ಪಾಕಿಸ್ತಾನದ ಈ ನಡೆಗೆ ತಕ್ಕ ಪ್ರತಿತಂತ್ರ ಹೆಣೆದಿದೆ ಎಂದು ಮೂಲಗಳು ಹೇಳಿವೆ.