ಇಬ್ಬರು ಮಹಿಳೆಯರ ಸಾವು

Contributed by: ayyanagowdara@gmail.com|Vijaya Karnataka•
accident and suicide reports of womens deaths
ಇಬ್ಬರು ಮಹಿಳೆಯರ ಸಾವು

ವಿಕ ಸುದ್ದಿಲೋಕ ಹಗರಿಬೊಮ್ಮನಹಳ್ಳಿ
ತಾಲೂಕಿನಲ್ಲಿಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.

ಪಟ್ಟಣದ ಅರಣ್ಯ ಇಲಾಖೆ ಕಚೇರಿ ತಿರುವಿನದಲ್ಲಿಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ತಾಲೂಕಿನ ಸಕ್ರಹಳ್ಳಿ ಗಡ್ಡಿ ನಿರ್ಮಲಮ್ಮ (60) ಮೃತರು. ಗ್ರಾಮದಿಂದ ಮಗನ ಬೈಕ್ ನಲ್ಲಿಪಟ್ಟಣಕ್ಕೆ ಬರುತ್ತಿದ್ದ ವೇಳೆ ಬೈಪಾಸ್ ರಸ್ತೆಯಲ್ಲಿಕೋಗಳಿ ತಾಂಡಾದ ಕಡೆಯಿಂದ ಬರುತ್ತಿದ್ದ ಖಾಲಿ ಲಾರಿಯೊಂದು ಹಿಂದಿನಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ನಿರ್ಮಲಮ್ಮ ಮೃತಪಟ್ಟಿದ್ದಾರೆ. ಘಟನೆಯಲ್ಲಿಬೈಕ್ ಸವಾರ ಅದೃಷ್ಟವಶಾತ್ ಒಂದೂ ಗಾಯವಿಲ್ಲದೆ ಪಾರಾಗಿದ್ದಾರೆ. ಪಟ್ಟಣದ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ,ಆತ್ಮಹತ್ಯೆ :

ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿಸಂಭವಿಸಿದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿಕೌಟುಂಬಿಕ ಕಲಹದಿಂದ ವಿಷ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ನರ್ಸ್ ಶಿಲ್ಪಾ(28) ಮೃತರು. ವೃತ್ತಿಯಲ್ಲಿ ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಪಾಡ್ಯದಂದು ಬುಧವಾರ ವಿಷ ಕುಡಿದು ಅಸ್ವಸ್ಥರಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಯುಡಿಆರ್ (ಅಸಹಜ ಸಾವು) ಎಂದು ದಾಖಲಿಸಿಕೊಳ್ಳಲಾಗಿದೆ.