ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಕಾರಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿಮಾತನಾಡಿದ ಶಿರಹಟ್ಟಿ ಎಫ್ .ಎಂ.ಡಬಾಲಿ ಕಾಲೇಜಿನ ಪ್ರಾಚಾರ್ಯ ಎಂ.ಸಿ.ಭಜಂತ್ರಿ ಹಾಗೂ ಎಫ್ .ಎಂ.ಡಬಾಲಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ಆರ್ .ಎಫ್ .ಬಟಗುರ್ಕಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿಹಾಗೂ ಬಸವರಾಜ ಹೊರಟ್ಟಿ ಅವರ ಮಾರ್ಗದರ್ಶನದಲ್ಲಿರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ನೌಕರರ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸರಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ನವೀನ ಬಸವರಡ್ಡಿ, ಎನ್ .ಎಚ್ .ಶಿಗ್ಲಿ, ಎನ್ .ಹನುಮರಡ್ಡಿ, ಎಸ್ .ಜಿ.ಲಮಾಣಿ, ಎನ್ .ಆರ್ .ಉಡಚಗೊಂಡ, ಎಫ್ .ಎ.ಬಾಬುಖಾನವರ, ಪಿ.ಎನ್ .ಕುಲಕರ್ಣಿ, ವೈ.ಎಸ್ .ಪಂಗಣ್ಣವರ, ಜಿ.ಕೆ.ಕರಕಣ್ಣವರ, ಕೆ.ವಿ.ಗೌಡರ, ಎಸ್ .ಎಸ್ .ನದಾಫ್ , ಜಿ.ಜೆ.ಶೇಳಕೆ, ಡಿ.ಐ.ಖಮಗಲ್ , ಪಿ.ವಿ.ಹೊಸೂರ, ಜಿ.ವಿ.ಬಡಿಗಣ್ಣವರ, ಎಸ್ .ಎಲ್ .ಮುಳಗುಂದ ಮುಂತಾದವರು ಉಪಸ್ಥಿತರಿದ್ದರು.
ಫೋಟೊ: 19 ಎಸ್ ಎಚ್ ಟಿ 1:
ಶಿರಹಟ್ಟಿಯಲ್ಲಿರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.