ಇತ್ತೀಚೆಗಷ್ಟೇ ಎರಡನೇ ಮಗಳು ಅಂಜನಾ ಅವರ ಅದ್ಧೂರಿ ಮದುವೆ ಸಂಭ್ರಮದಲ್ಲಿದ್ದ ನಟ ಅರ್ಜುನ್ ಸರ್ಜಾರ ದೊಡ್ಡ ಮಗಳು ಐಶ್ವರ್ಯಾ ದಾಂಪತ್ಯ ಜೀವನದಲ್ಲಿಬಿರುಕು ಮೂಡಿದೆ. ಈ ಕುರಿತಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಮೊದಲನೆಯದಾಗಿ, ಅಂಜನಾ ಅವರ ವಿವಾಹದ ಸಂದರ್ಭದಲ್ಲಿಅವಳಿಗೆ ಮತ್ತು ನಮ್ಮ ಕುಟುಂಬಕ್ಕೆ ಪ್ರೀತಿ ಮತ್ತು ಸುಂದರ ಶುಭಾಶಯಗಳನ್ನು ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ನಿಮ್ಮ ವಾತ್ಸಲ್ಯ ಮತ್ತು ಸದ್ಭಾವನೆ ನಮಗೆ ಯಾವಾಗಲೂ ಬಹಳ ಮುಖ್ಯವಾಗಿದೆ ಮತ್ತು ನಮ್ಮನ್ನು ತಮ್ಮ ಪ್ರಾರ್ಥನೆ ಹಾಗೂ ಆಲೋಚನೆಗಳಲ್ಲಿನೆನಪಿಸಿಕೊಂಡ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ. ಆದಾಗ್ಯೂ, ಇಂತಹದೊಂದು ವಿಷಯವನ್ನು ನಾನು ಸಾರ್ವಜನಿಕವಾಗಿ ಪ್ರಸ್ತಾಪಿಸಬೇಕಾಗುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ.
ನನ್ನ ಕಿರಿಯ ಮಗಳ ಮದುವೆಯಾದಾಗ, ನನ್ನ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಅವಳ ಖಾಸಗಿತನ ಗೌರವಿಸಲು ಮತ್ತು ಅವಳೊಬ್ಬಳೇ ಹಂಚಿಕೊಳ್ಳಬೇಕಾದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದರಿಂದ ದೂರವಿರಲು ನಾನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದೆ. ಪ್ರತಿ ಮಹಿಳೆಗೂ ತನ್ನದೇ ಆದ ಆಯ್ಕೆಗಳನ್ನು ಮಾಡಿಕೊಳ್ಳುವ ಮತ್ತು ತನ್ನದೇ ಆದ ನಿಯಮಗಳ ಮೇಲೆ ಜೀವನ ನಡೆಸುವ ಹಕ್ಕಿದೆ. ಅವಳು ಬಯಸಿದರೆ ತನಗೆ ಸೂಕ್ತವೆನಿಸಿದ ಸಮಯದಲ್ಲಿತಾನೇ ಸ್ವತಃ ಮಾತನಾಡುತ್ತಾಳೆ. ಆದರೆ, ಒಬ್ಬ ತಂದೆಯಾಗಿ, ನನ್ನ ಮಗಳು, ಅವಳ ವ್ಯಕ್ತಿತ್ವ (ಚಾರಿತ್ರ್ಯ) ಮತ್ತು ಅವಳ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಹಾಗೂ ಅತ್ಯಂತ ಅವಹೇಳನಕಾರಿ ಆರೋಪಗಳನ್ನು ಮಾಡುವುದನ್ನು ನೋಡಿ ನಾನು ಮೌನವಾಗಿರಲು ಸಾಧ್ಯವಿಲ್ಲ.
ನಟರಾಗಿ, ಸಾರ್ವಜನಿಕ ಜೀವನವು ಅನಿವಾರ್ಯವಾಗಿ ಊಹಾಪೋಹಗಳನ್ನು ಮತ್ತು ವಿಮರ್ಶೆಗಳನ್ನು ಆಹ್ವಾನಿಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ, ಕೇವಲ ಊಹಾಪೋಹಗಳಿಗೂ ಮತ್ತು ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸ್ಪಷ್ಟವಾದ ವ್ಯತ್ಯಾಸವಿದೆ. ಸಾರ್ವಜನಿಕ ವಿಮರ್ಶೆಯು ಯಾರಿಗೂ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ಚಾರಿತ್ರ್ಯವಧೆ ಮಾಡಲು ಪರವಾನಗಿ ನೀಡುವುದಿಲ್ಲ. ಯಾವುದೇ ಆಧಾರವಿಲ್ಲದೆ ಒಬ್ಬ ಮಹಿಳೆಯನ್ನು ಮದ್ಯವ್ಯಸನಿ ಎಂದು ಹಣೆಪಟ್ಟಿ ಕಟ್ಟುವುದು ಸೇರಿದಂತೆ ನಿರಾಧಾರ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯಾಗಿದೆ. ಮೌನವೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಆದರೆ ಮೌನವನ್ನು ಎಂದಿಗೂ ಒಪ್ಪಿಗೆ ಎಂದು ತಪ್ಪಾಗಿ ಭಾವಿಸಬಾರದು ಅಥವಾ ಅದು ತಪ್ಪು ಮಾಹಿತಿಯನ್ನು ಪದೇಪದೆ ಪ್ರಸಾರ ಮಾಡಲು ಮತ್ತು ದೊಡ್ಡದು ಮಾಡಲು ಅವಕಾಶ ನೀಡಬಾರದು. ಆದ್ದರಿಂದ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಔಪಚಾರಿಕ ದೂರು ನೀಡುವ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ.
ಪತ್ರಿಕೋದ್ಯಮ ಮತ್ತು ವರದಿಗಾರಿಕೆ ನಾನು ಅಪಾರ ಗೌರವ ಹೊಂದಿರುವ ವೃತ್ತಿಗಳಾಗಿವೆ. ಆದರೆ, ಕೆಲವು ಮಾಧ್ಯಮ ವಿಭಾಗಗಳು ಸತ್ಯ ಅಥವಾ ವಿಶ್ವಾಸಾರ್ಹತೆಗೆ ಕಿಂಚಿತ್ತೂ ಬೆಲೆ ನೀಡದೆ ಕೇವಲ ತಮ್ಮ ಸುದ್ದಿಗಳನ್ನು ಮಾರಾಟ ಮಾಡಿಕೊಳ್ಳುವ ಸಲುವಾಗಿ ಆಧಾರರಹಿತ ಆರೋಪಗಳು ಮತ್ತು ವೈಯಕ್ತಿಕ ದಾಳಿಗಳನ್ನು ವೈಭವೀಕರಿಸುವ ಮೂಲಕ ಈ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇದು ಕೇವಲ ನನ್ನ ಮಗಳ ಬಗ್ಗೆ ಮಾತ್ರವಲ್ಲ, ಘನತೆಯನ್ನು ಪ್ರಶ್ನಿಸಲಾಗುವ ಮತ್ತು ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕ ತೀರ್ಪಿಗೆ ಒಳಪಡಿಸುವ ಪ್ರತಿ ಮಹಿಳೆಯ ಬಗೆಗಿನ ವಿಷಯವಾಗಿದೆ. ತಮ್ಮ ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ವಿಶೇಷವಾಗಿ ಹಾನಿಕಾರಕವಾಗಬಹುದು, ಇದು ಈಗಾಗಲೇ ಕಷ್ಟಕರವಾಗಿರುವ ಅವರ ಪಯಣವನ್ನು ಇನ್ನಷ್ಟು ಕಠಿಣಗೊಳಿಸುತ್ತದೆ. ಯಾವ ಮಹಿಳೆಯೂ ಅದನ್ನು ಒಂಟಿಯಾಗಿ ಎದುರಿಸಬಾರದು ಅಥವಾ ತಾನು ಬದುಕಲು ಆಯ್ಕೆ ಮಾಡಿಕೊಂಡ ರೀತಿಯನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿ ಬರಬಾರದು.
ಒಬ್ಬ ತಂದೆಯಾಗಿ, ನನ್ನ ಮಗಳೊಂದಿಗೆ ಮತ್ತು ಘನತೆ, ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಯೊಂದಿಗೆ ಬದುಕುವ ಅವಳ ಹಕ್ಕಿನೊಂದಿಗೆ ನಾನು ಯಾವಾಗಲೂ ನಿಲ್ಲುತ್ತೇನೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಸೂಕ್ತ ಎಚ್ಚರಿಕೆ ವಹಿಸುತ್ತಾರೆ ಎಂದು ನಾನು ನಂಬುತ್ತೇನೆ. ಇಂತಹ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಇನ್ನು ಮುಂದೆ ಪ್ರಸಾರ ಮಾಡಿದರೆ ಅಥವಾ ಹರಡಿದರೆ ಸೂಕ್ತ ಕಾನೂನು ಕ್ರಮದ ಮೂಲಕ ಎದುರಿಸಲಾಗುವುದು.
ಗೌರವ ಮತ್ತು ಘನತೆ ಎಂದಿಗೂ ರಾಜಿ ಮಾಡಿಕೊಳ್ಳುವ ವಿಷಯಗಳಲ್ಲ.