ಸರ್ವೆ ನಡೆಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

Contributed by: verendragoud@gmail.com|Vijaya Karnataka•
Vijay Karnataka
ಜೋಗ ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿ/ಜಮೀನುಗಳ ಗಡಿ ಗುರುತಿಸಲು ಆಗ್ರಹ

ರಸ್ತೆ ಕಾಮಗಾರಿ ಪೂರ್ಣಗೊಳಿಸಿ
ವಿಕ ಸುದ್ದಿಲೋಕ ಸಂಡೂರು

ತಾಲೂಕಿನ ತೋರಣಗಲ್ಲುಹೋಬಳಿಯ ಜೋಗ ಗ್ರಾಮದ ಜಮೀನುಗಳನ್ನು ಅಧಿಕೃತ ದಾಖಲೆಗಳಂತೆ ಸರ್ವೆ ಮಾಡಿ, ಸರಕಾರಿ ಜಮೀನುಗಳ ಗಡಿ ಗುರುತಿಸಿ ಹದ್ದುಬಂದಿ ನಿರ್ಮಿಸಬೇಕು. ರಸ್ತೆ ಬದಿ ಜಮೀನು ಮಾಲೀಕರ ಅನುಮಾನ ನಿವಾರಿಸಿ ರಸ್ತೆ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿ, ಪ್ರಭಾರಿ ತಹಸೀಲ್ದಾರ್ ಸುಧಾ ಅರಮನೆ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕೆಪಿಆರ್ ಎಸ್ ಮುಖಂಡ ಜೆ.ಎಂ.ಚನ್ನಬಸಯ್ಯ ಮಾತನಾಡಿ, ‘‘ದಾರಿ ಸಮಸ್ಯೆ ನೆಪದಲ್ಲಿರಸ್ತೆ ಕಾಮಗಾರಿಯ ಅನುದಾನ ರದ್ದುಪಡಿಸಬಾರದು ಅಥವಾ ಬೇರೆಡೆ ವರ್ಗಾಯಿಸಬಾರದು. ತಾಳೂರು ಸಂಪರ್ಕದ ಸಿಂಗಪುರ ಬಸವಣ್ಣ ರಸ್ತೆ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು. ನೀರಾವರಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಪೂರೈಸಲು ಹೆಚ್ಚುವರಿ ಟಿಸಿಗಳನ್ನು ಅಳವಡಿಸಬೇಕು. ಕಾಡುಪ್ರಾಣಿಗಳಿಂದ ರೈತರಿಗೆ ರಕ್ಷಣೆ ನೀಡಿ, ಬೆಳೆಹಾನಿಗೆ ಪರಿಹಾರ ಒದಗಿಸಬೇಕು. ಫಾರಂ-57ರಡಿ ಅರ್ಜಿ ಸಲ್ಲಿಸಿರುವ 200ಕ್ಕೂ ಹೆಚ್ಚು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಬಿಟ್ಟುಹೋದ ಅರ್ಜಿಗಳನ್ನು ಪಟ್ಟಿಗೆ ಸೇರಿಸಿ, ಪಹಣಿಯಲ್ಲಿನ ‘ಬಿ.ಕರಾಬು’ ಹಾಗೂ ‘ಗಯಾಳು’ ನಮೂದು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

‘‘ಗಂಜಿ ಹನುಮಪ್ಪ ದಾರಿ, ಬಳ್ಳಾರಿ ನಾರಾಯಣಪ್ಪ ತೋಟದಿಂದ ಗೋವರ್ಧನ ಹೊಲದ ದಾರಿ, ಹಳೆ ಗಾದಿಗನೂರು ದಾರಿ ಸೇರಿ ಎಲ್ಲಬಂಡಿ ರಸ್ತೆ ದುರಸ್ತಿ, ಜೋಗ ಕೆರೆಗೆ ತುಂಗಭದ್ರಾ ನೀರು, ಬಸ್ ಸೌಲಭ್ಯ, ಬಸ್ ನಿಲ್ದಾಣ, ಗ್ರಂಥಾಲಯ, ಆರೋಗ್ಯ, ಪಡಿತರ, ಕಲ್ಯಾಣ ಮಂಟಪ, ವಸತಿ ನಿವೇಶನ, ಮಸಣಗಳಿಗೆ ರಕ್ಷಣಾ ಗೋಡೆ, ಹೈನುಗಾರಿಕೆ ಹಾಗೂ ಯುವಕರಿಗೆ ಕೌಶಲ್ಯ ತರಬೇತಿ ನೀಡಬೇಕು,’’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿಕೆಪಿಆರ್ ಎಸ್ ನ ಖಲಂದರಬಾಷಾ, ಪಂಪನಗೌಡ, ಎಸ್ .ಕಾಲೂಬ, ಎ.ಸ್ವಾಮಿ, ಸಿಪಿಐ(ಎಂ)ನ ಎನ್ .ಶಂಕ್ರಣ್ಣ, ಬಳ್ಳಾರಿ ಹನುಮಂತಪ್ಪ, ಎಚ್ .ಹನುಮಂತಪ್ಪ, ಪಿ.ಶರಣಬಸವ, ಜಿ.ಭದ್ರಗೌಡ, ರಾಮಣ್ಣ, ಎ.ಹೊನ್ನೂರಪ್ಪ, ಮಾರೇಶ, ಯಂಕಪ್ಪ, ಉಮೇಶ, ಕೆ.ಹೊನ್ನೂರಪ್ಪ ಹಾಗೂ ಕೆ.ಬಸವರಾಜ ಇದ್ದರು.

...............

ಬಿಎಲ್ ವೈ 19 ಎಸ್ಡಿಆರ್ 1:

ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ತಹಸೀಲ್ದಾರ್ ಸುಧಾ ಅರಮನೆಯವರಿಗೆ ಮನವಿ ಸಲ್ಲಿಸಿದ ಜೋಗ ಗ್ರಾಮಸ್ಥರು.