ಧರ್ಮದ ಹಾದಿಯಿಂದ ಬದುಕಿಗೆ ಶ್ರೇಯಸ್ಸು

Contributed by: mahammed.arif@timesofindia.com|Vijaya Karnataka•
Vijay Karnataka
ಸಾಮೂಹಿಕ ಸೀಯಾಳಾಭಿಷೇಕದಲ್ಲಿಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

ವಿಕ ಸುದ್ದಿಲೋಕ ಮಂಗಳೂರು
ನಮ್ಮ ಬದುಕು ಬಂಗಾರವಾಗಬೇಕಾದರೆ ಬರುವ ಕಷ್ಟಗÜಳನ್ನು ಎದುರಿಸಿ ಧರ್ಮದ ಹಾದಿಯಲ್ಲಿನಡೆಯಬೇಕು. ಅಧರ್ಮದಿಂದ ಗಳಿಸಿದ ಸಂಪತ್ತಿನಿಂದ ಶ್ರೇಯಸ್ಸು ಖಂಡಿತಾ ಲಭಿಸದು ಎಂದು ಆನೆಗುಂದಿ ಸಂಸ್ಥಾನದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿದ.ಕ. ಜಿಲ್ಲಾಚಿನ್ನದ ಕೆಲಸಗಾರರ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸೀಯಾಳಾಭಿಷೇಕ ಕಾರ್ಯಕ್ರಮದಲ್ಲಿಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಕಾಳಿಕಾಂಬಾ, ವಿನಾಯಕ, ಶ್ರೀ ವಿಶ್ವಕರ್ಮ ದೇವರಿಗೆ ಮತ್ತು ಕ್ಷೇತ್ರದ ಪರಿವಾರ ಸಾನ್ನಿಧ್ಯಗಳಿಗೆ ಸಾಮೂಹಿಕ ಸೀಯಾಳ ಅಭಿಷೇೕಕವು ಕ್ಷೇತ್ರದ ತಂತ್ರಿ ಲಕ್ಷ್ಮೇಕಾಂತ ಶರ್ಮ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ವಿN್ನೕಶ್ ಪುರೋಹಿತ್ , ಸುದರ್ಶನ ಪುರೋಹಿತ್ , ಗುರುಪ್ರಸಾದ್ , ಚೇತನ್ ಶರ್ಮ ಅವರಿಂದ ನಡೆಯಿತು.

ಕ್ಷೇತ್ರದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಪಾಂಡೇಶ್ವರ, ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್ .ಹರೀಶ್ , ಕಾರ್ಯದರ್ಶಿ ಪ್ರಕಾಶ್ ಹಲೇಜಿ, ಕೋಶಾಧಿಕಾರಿ ಪ್ರಕಾಶ್ ಕುಂಟಾಡಿ, ಕ್ಷೇತ್ರದ ಮಾಜಿ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ, ಎ.ಲೋಕೇಶ ಆಚಾರ್ಯ, ನಾಗರಾಜ ಮಂಗಳಾದೇವಿ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿ ಅಧ್ಯಕ್ಷೆ ಅರುಣಾ ಸುರೇಶ್ , ಎಸ್ ಕೆಜಿಐ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಮತ್ತಿತರರು ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಫೊಟೊ-19ಎಂ-ಚಿನ್ನ ದಕೆಲಸಗಾರ

ಮಂಗಳೂರಿನಲ್ಲಿಸಾಮೂಹಿಕ ಸೀಯಾಳಾಭಿಷೇಕದಲ್ಲಿಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಸ್ವಾಮೀಜಿ ಆಶೀರ್ವಚನ ನೀಡಿದರು.

---------