ವಿಕ ಸುದ್ದಿಲೋಕ ಮಲೇಬೆನ್ನೂರುಪಟ್ಟಣದ ಶ್ರೀ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿಮೊದಲ ಬಾರಿಗೆ ಲೋಕ ಕಲ್ಯಾಣಾರ್ಥಕ್ಕಾಗಿ ನ.22ರಿಂದ 27ರವರೆಗೆ ವಿಶ್ವಕರ್ಮ ಸಮಾಜದಿಂದ ಕಾಳಿಕಾದೇವಿಯ ಲಕ್ಷ ದೀಪೋತ್ಸವ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿಗುರುವಾರ ಸುದ್ದಿಗೋಷ್ಟಿಯಲ್ಲಿವಿಶ್ವಕರ್ಮ ಸಮಾಜದ ಕಾರ್ಯದರ್ಶಿ ವಿ.ಆನಂದಚಾರ್ ಮಾತನಾಡಿ, 22ರ ಭಾನುವಾರ ಬ್ರಾಹ್ಮೀ ಮುಹೂರ್ತದಲ್ಲಿಗಣಪತಿ ಪೂಜೆ, ವಿಶ್ವಕರ್ಮ ಧ್ವಜಾರೋಹಣ, ಕಾಳಿಕಾ ದೇವಿಗೆ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ನ.25ರ ಬೆಳಗ್ಗೆ 8.30ಕ್ಕೆ ದೇವಿಯ ಪಲ್ಲಕ್ಕಿ ಉತ್ಸವ, 26ರಂದು ಕಾಳಿಕಾದೇವಿಗೆ ಅಭಿಷೇಕ ಮತ್ತು ಚಂಡಿಕಾ ಹೋಮ ಹಾಗೂ ಪೂರ್ಣಾಹುತಿ ಜರುಗಲಿದೆ ಎಂದರು.
27ರ ಶುಕ್ರವಾರ ಕಾಳಿಕಾದೇವಿಗೆ ಅಭಿಷೇಕ ಮತ್ತು ಸಂಜೆ 6.30ಕ್ಕೆ ದೀಪೋತ್ಸವ ನಡೆಯಲಿದೆ. ಹಾಸನ ಜಿಲ್ಲೆಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ವಿಶ್ವ ಬ್ರಾಹ್ಮಣ ಸಂಸ್ಥಾನ ಮಠದ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ವಡ್ಡನಹಾಳ್ ಕಾಶಿಮಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಯಾದಗಿರಿ ಜಿಲ್ಲೆಶಹಾಪುರದ ವಿಶ್ವಕರ್ಮ ಏಕದಂಡಿಗೆ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಶ್ರೀ ಜ್ಞಾನಘನ ವಿದ್ಯಾತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಉಸ್ತುವಾರಿ ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ್ , ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ , ಮಾಜಿ ಡಿಸಿಎಂ ಕೆ.ಎಸ್ . ಈಶ್ವರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ , ಶಾಸಕ ಬಿ.ಪಿ. ಹರೀಶ್ , ಮಾಜಿ ಶಾಸಕ ಎಚ್ .ಎಸ್ . ಶಿವಶಂಕರ್ , ಮಾಜಿ ಸಚಿವ ಎಂ.ಪಿ. ರೆಣುಕಾಚಾರ್ಯ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಪಾಲ್ಗೊಳ್ಳುವರು ಎಂದರು.
ಗೋಷ್ಠಿಯಲ್ಲಿವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ ಪ್ರಕಾಶ್ , ಉಪಾಧ್ಯಕ್ಷ ಕೆ.ಕೇಶವಾಚಾರ್ , ಡಿ.ಕುಮಾರ್ , ಕೆ.ಶಂಕರಾಚಾರ್ , ಎಂ.ಆಚಾರಪ್ಪ, ಮೇಘಚಾರ್ , ಕೆ.ಲೋಕೆಶಚಾರ್ , ಬಿ. ದಿನೇಶಚಾರ್ , ರವೀಂದ್ರಚಾರ್ , ಪ್ರಕಾಶಚಾರ್ , ದಯಾನಂದಚಾರ್ ಇದ್ದರು.