ಪಾಣಾಜೆ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.23ರಿಂದ 26ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ನ.23ರಂದು ಬೆಳಗ್ಗೆ 9ಕ್ಕೆ ಬಲಿವಾಡು ಶೇಖರಣೆ, ರಾತ್ರಿ ಶ್ರೀ ಮಹಾಗಣಪತಿ ಪೂಜೆ, ನ.24ರಂದು ಬೆಳಗ್ಗೆ ಗಣಪತಿ ಹೋಮ, ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ದೇವರಬಲಿ, ಪ್ರಸಾದ ವಿತರಣೆ, ಬ್ರಹ್ಮಸಮಾರಾಧನೆ, ರಾತ್ರಿ 9ಕ್ಕೆ ಮಹಾಪೂಜೆ,ಉತ್ಸವ,ದೇವರ ಭೂತಬಲಿ, ಬಳಿಕ ದೇವರ ಬಲಿ ಹೊರಟು ಕಟ್ಟೆ ಪೂಜೆ, ಜಿಲ್ವಗಿರಿ ಪ್ರವೇಶ,ಕೆರೆ ಉತ್ಸವ, ಗರ್ಭಗುಡಿ ಪ್ರವೇಶ ಹಾಗೂ ಮಂಗಳಾರತಿ ನಡೆಯಲಿದೆ.ನ.25ರಂದು ಬೆಳಗ್ಗೆ 10ಕ್ಕೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿಮಹಾಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9ಕ್ಕೆ ದೇವರ ಮಹಾಪೂಜೆ, ಜಟಾಧಾರಿ ದೈವದ ಭಂಡಾರ ತೆಗೆಯುವುದು ಮತ್ತು ರಾತ್ರಿ 1ರಿಂದ ಜಟಾಧಾರಿ ದೈವದ ಮಹಿಮೆ ಜರುಗಲಿದೆ. ನ. 26ರಂದು ಬೆಳಗ್ಗೆ 8ಕ್ಕೆ ಧೂಮಾವತಿ ನೇಮ, ಮಧ್ಯಾಹ್ನ ಮಹಾಪೂಜೆ, 2ರಿಂದ ಹುಲಿಭೂತ ನೇಮದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ನ.24ರಂದು ರಾತ್ರಿ 7ರಿಂದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ಹಾಗೂ ಜಿಲ್ವಗಿರಿ ಕಟ್ಟೆಪೂಜೆಯ ಸಂದರ್ಭದಲ್ಲಿಊರ ಹತ್ತು ಸಮಸ್ತರಿಂದ ಬೆಟ್ಟಂಪಾಡಿ ಬೆಡಿ ನಡೆಯಲಿದೆ. ನ.25ರಂದು ರಾತ್ರಿ 9ರಿಂದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಜರುಗಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಜಿ.ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಮೊಕ್ತೇಸರರಾದ ವಿನೋದ್ ಕುಮಾರ್ ರೈ ಬೆಟ್ಟಂಪಾಡಿ ಗುತ್ತು ಹಾಗೂ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ಪ್ರಮುಖರು ತಿಳಿಸಿದ್ದಾರೆ.