ಪ್ರಜಾಸೇವಾ ಆಯುಕ್ತಾಲಯ ಸ್ಥಾಪಿಸಿ ಆದೇಶ

Contributed by: keerthi.prasad@timesofindia.com|Vijaya Karnataka•
Vijay Karnataka
‘ಹೆಚ್ಚುವರಿ ನಿರ್ದೇಶಕರು, ಸಕಾಲ ಮಿಷನ್ ’ ಹುದ್ದೆಯೂ ವಿಲೀನ

ಬೆಂಗಳೂರು: ಸರಕಾರದಲ್ಲಿಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯಡಿ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪಿಸಿ ಸರಕಾರ ಆದೇಶ ಹೊರಡಿಸಿದೆ.
ನೂತನ ಆಯುಕ್ತಾಲಯ ಸ್ಥಾಪನೆಯಿಂದ ಜನರಿಗೆ ಸರಕಾರಿ ಸೇವೆಗಳು ಮತ್ತಷ್ಟು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಲಭ್ಯವಾಗುವ ನಿರೀಕ್ಷೆ ಮೂಡಿದೆ. ಮುಖ್ಯಮಂತ್ರಿಗಳ ಅನುಮೋದನೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಅದರಂತೆ ಈವರೆಗೆ ಚಾಲ್ತಿಯಲ್ಲಿದ್ದ ‘ಹೆಚ್ಚುವರಿ ನಿರ್ದೇಶಕರು, ಸಕಾಲ ಮಿಷನ್ ’ ಹುದ್ದೆಯನ್ನು ಇನ್ನು ಮುಂದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ‘ ಎಂದು ಮರುಪದನಾಮಕರಣ ಮಾಡಲಾಗಿದೆ. ಇಲಾಖೆ ಆಯುಕ್ತರು ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಜೂನ್ 24ರಂದು ಸರಕಾರ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಿತ್ತು.