ಹಂಪಿ: ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಶಿವಮೊಗ್ಗದ ರಾಜೇಂದ್ರ ಆರ್ .ಇ ಪೆಟ್ರೋನಾಸ್ ಟಿವಿಎಸ್ ರೇಸಿಂಗ್ ತಂಡಕ್ಕೆ ಮುನ್ನಡೆ ನೀಡುವ ಮೂಲಕ ಪೊಡಿಯಂ ಸ್ವೀಪ್ ಸಾಧಿಸಲು ನೆರವಾದರು.
ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ಆಫ್ ವಿಜಯನಗರ ಆಯೋಜಿಸಿದ್ದ ಎಂಆರ್ ಎಫ್ ಮೊಗ್ರಿಪ್ ಎಫ್ ಎಂಎಸ್ ಸಿಐ ರಾಷ್ಟ್ರೀಯ ದ್ವಿಚಕ್ರ ವಾಹನ ರಾರ ಯಲಿ ಚಾಂಪಿಯನ್ ಷಿಪ್ ನ ಎರಡನೇ ಸುತ್ತು ಭಾನುವಾರ ಹಂಪಿಯಲ್ಲಿಮುಕ್ತಾಯಗೊಂಡಿತು. ಪ್ರೊ ಎಕ್ಸ್ ಪರ್ಟ್ ಸೂಪರ್ ಬೈಕ್ ವಿಭಾಗದಲ್ಲಿಜಯಗಳಿಸಿದ ರಾಜೇಂದ್ರ ಒಟ್ಟಾರೆ ಸ್ಪರ್ಧೆಯಲ್ಲಿಯೂ ಅತಿ ವೇಗದ ಸಮಯ ದಾಖಲಿಸಿದರು. ಟಿವಿಎಸ್ ಆರ್ ಟಿಆರ್ 450 ಬೈಕ್ ನಲ್ಲಿಸ್ಪರ್ಧಿಸಿದ ಅವರು 3 ವಿಶೇಷ ಹಂತಗಳನ್ನು 58 ನಿಮಿಷ 55.122 ಸೆಕೆಂಡ್ ಗಳಲ್ಲಿಪೂರ್ಣಗೊಳಿಸಿದರು.ಅವರ ತಂಡದ ಸಹ ಸ್ಪರ್ಧಿ ಅಬ್ದುಲ್ ವಾಹಿದ್ (59:02.523) ಮತ್ತು ಸ್ಯಾಮ್ಯುಯೆಲ್ ಜೇಕಬ್ (1:02:12.894) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದರು.ಈ ಮೂಲಕ ಪೆಟ್ರೋನಾಸ್ ಟಿವಿಎಸ್ ರೇಸಿಂಗ್ ತಂಡ ಪೊಡಿಯಂ ಸ್ವೀಪ್ ಮಾಡಿತು.