ಡಿ.1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ | ಸುದ್ದಿಗೋಷ್ಠಿಯಲ್ಲಿಜಿಲ್ಲಾಧಿಕಾರಿ ಎಂ.ಆರ್ .ರವಿಕುಮಾರ್ ಮಾಹಿತಿ
ವಿಕ ಸುದ್ದಿಲೋಕ ಕೋಲಾರಜಿಲ್ಲೆಯ ಆರು ತಾಲೂಕುಗಳಲ್ಲಿವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, 1,200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸದಾಗಿ 37 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್ .ರವಿಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿಗುರುವಾರ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಎಸ್ ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿಒಟ್ಟು 12,95,265 ಮತದಾರರಿದ್ದು, ಗೈರುಹಾಜರಿ, ಸ್ಥಳಾಂತರ ಹಾಗೂ ದ್ವಿ-ನೋಂದಣಿ ಪಟ್ಟಿಯಲ್ಲಿ1,71,034 ಮತದಾರರು ಹೊರಗುಳಿದಿದ್ದಾರೆ. ಸುಮಾರು 1,42,000 ಜನರಿಗೆ ನೋಟಿಸ್ ನೀಡಿ ದಾಖಲೆ ಪರಿಶೀಲಿಸಿದ ಬಳಿಕ 6,234 ಮತದಾರರನ್ನು ಕೈಬಿಡಲಾಗಿದೆ. ಅಕ್ಟೋಬರ್ 27, 2026ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿಒಟ್ಟು 11,39,393 ಮತದಾರರಿದ್ದಾರೆ ಎಂದು ವಿವರಿಸಿದರು.
ಮತಗಟ್ಟೆಗಳ ವಿವರ ನೀಡಿದ ಅವರು, ಎಸ್ ಐಆರ್ ಗೂ ಮುನ್ನ ಜಿಲ್ಲೆಯಲ್ಲಿ1,538 ಮತಗಟ್ಟೆಗಳಿದ್ದು, ಪರಿಷ್ಕರಣೆ ವೇಳೆ 40 ಹೆಚ್ಚುವರಿ ಮತಗಟ್ಟೆ ಸೇರ್ಪಡೆಯಾಗಿ 1,578ಕ್ಕೆ ಏರಿಕೆಯಾಗಿತ್ತು. ಇದೀಗ ಪುನಃ 37 ಹೊಸ ಮತಗಟ್ಟೆಗಳು ಸೇರ್ಪಡೆಯಾಗುತ್ತಿದ್ದು, ಇದರಲ್ಲಿಶ್ರೀನಿವಾಸಪುರ ತಾಲೂಕಿನಲ್ಲಿ3, ಮುಳಬಾಗಲಿನಲ್ಲಿ6, ಕೆಜಿಎಫ್ ನಲ್ಲಿ4, ಬಂಗಾರಪೇಟೆಯಲ್ಲಿ7, ಕೋಲಾರದಲ್ಲಿ7 ಹಾಗೂ ಮಾಲೂರಿನಲ್ಲಿ10 ಹೊಸ ಮತಗಟ್ಟೆಗಳು ಸ್ಥಾಪನೆಯಾಗಲಿವೆ ಎಂದರು.
ಪ್ರಸ್ತುತ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 1,942 ಅರ್ಜಿಗಳು ಸಲ್ಲಿಕೆಯಾಗಿವೆ. ಡಿಸೆಂಬರ್ 1, 2026ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆ ಹಾಗೂ ಸೇರ್ಪಡೆಗೆ (ಫಾರಂ 6, 7, 8) ಜನವರಿ 1, 2027ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಪರಿಶೀಲನೆ ಬಳಿಕ ಜನವರಿ 20, 2027ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಜನವರಿ 25ರ ರಾಷ್ಟ್ರೀಯ ಮತದಾರರ ದಿನದಂದು ಹೊಸ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.
ಅಪೂರ್ಣ ದಾಖಲೆಗಳಿಂದ ಎಸ್ ಐಆರ್ ನಲ್ಲಿಅರ್ಜಿ ತಿರಸ್ಕೃತಗೊಂಡಿದ್ದ ಅರ್ಹ ಮತದಾರರು ಸೂಕ್ತ ದಾಖಲೆಗಳೊಂದಿಗೆ ಫಾರಂ 6ರ ಮೂಲಕ ಮರು ಅರ್ಜಿ ಸಲ್ಲಿಸಬಹುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಾಮೂಹಿಕವಾಗಿ (ಬಲ್ ್ಕ) ಹೆಸರು ಕೈಬಿಡಲು ಅರ್ಜಿ ನೀಡಲು ಅವಕಾಶವಿಲ್ಲಎಂದು ಸ್ಪಷ್ಟಪಡಿಸಿದ ಅವರು, ಎಸ್ ಎಸ್ ಆರ್ ಪ್ರಕ್ರಿಯೆಗೂ ರಾಜಕೀಯ ಪಕ್ಷಗಳು ಹಾಗೂ ಬಿಎಲ್ ಎಗಳು ಸಹಕಾರ ನೀಡುವಂತೆ ಮನವಿ ಮಾಡಿದರು.