ಬೆಳಗಾವಿ: ಗೃಹಲಕ್ಷ್ಮೀ ಹಣದಲ್ಲಿಪಾಲು ನೀಡಲು ನಿರಾಕರಿಸಿದ ಅಜ್ಜಿಯನ್ನು ಮೊಮ್ಮಗನೇ ಕೊಲೆ ಮಾಡಿದ ಕೃತ್ಯವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವಾ ಬಾಲಪ್ಪ ಸನದಿ (78) ಕೊಲೆಯಾದ ವೃದ್ಧೆ. ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಆರೋಪಿ. ಅಜ್ಜಿಯನ್ನು ಬೈಕ್ ನಲ್ಲಿಗವಿಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದು ಹಣದ ವಿಚಾರವಾಗಿ ಜಗಳವಾಡಿದ್ದ ಭೀಮಪ್ಪ, ಹಣ ನೀಡಲು ನಿರಾಕರಿಸಿದಾಗ ಕುತ್ತಿಗೆ ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.