ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಕ್ಕೂ ಮುನ್ನವೇ 328 ಕೋಟಿ ರೂ. ಹಣ ಗುತ್ತಿಗೆದಾರರಿಗೆ ನೀಡಿದ್ದು, ಕಾಮಗಾರಿ ಹೆಸರಿನಲ್ಲಿಅವ್ಯವಹಾರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ ರಾಜ್ಯ ಸಂಚಾಲಕ ಆನಂದ್ ಪಟೇಲ್ ಟೀಕಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, 34.5 ಕಿಮೀ ಲಿಂಕ್ ಕೆನಾಲ್ ಕಾಮಗಾರಿಗೆ ಸರಕಾರ ಒಂದು ಸಾವಿರ ಕೋಟಿ ಹಣ ರೂ. ಹಣ ಮಂಜೂರು ಮಾಡಿ, ಕಾಮಗಾರಿ ಪ್ರಾರಂಭಿಸಿದೆ. ಸ್ಥಳೀಯ ರೈತರಿಗೆ ಭೂ ಪರಿಹಾರ ನೀಡಿಲ್ಲ, ಆರು ಕಿಮೀ. ಕಾಮಗಾರಿ ಆಗಿದೆ ಎಂದು 328 ಕೋಟಿ ಹಣವನ್ನು ಗುತ್ತಿಗೆದಾರ ಕಂಪನಿಗೆ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೇ 34.5 ಕಿ.ಮೀ ಕಾಮಗಾರಿಗೆ ಬೇಕಾದ ಪೈಪ್ ಗಳನ್ನು ತರಲಾಗಿದೆ ಹಾಗಾಗಿ ಸರಬರಾಜಿಗೆ ಬಿಲ್ ನೀಡಲಾಗಿದೆ ಎಂದು ಉತ್ತರಿಸುತ್ತಾರೆ ಎಂದು ಕಿಡಿಕಾರಿದರು.
ಪ್ರಚಾರಕ್ಕಾಗಿ ಶಾಸಕರ ಗಿಮಿಕ್ : ಶಾಸಕ ಡಾ.ಎಚ್ .ಡಿ.ರಂಗನಾಥ್ ಇಡೀ ಜಿಲ್ಲೆಯಲ್ಲಿಗೊಂದಲಮಯ ವಾತಾವರಣ ಸೃಷ್ಟಿಸಿ, ಲಿಂಕ್ ಕೆನಾಲ್ ಅನ್ನು ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಳ್ಳಲು, ಗಿಮಿಕ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ತಾಲೂಕಿನಲ್ಲಿ40 ಸಾವಿರ ಎಕರೆ ಅಚ್ಚು ಕಟ್ಟು ಪ್ರದೇಶವಿದ್ದು, ಈವರೆಗೂ ಸಂಪರ್ಕ ನಾಲೆಗಳನ್ನು ಮಾಡಿಲ್ಲ. ಮೊದಲು ಸಂಪರ್ಕ ನಾಲೆಗಳನ್ನು ಮಾಡಿ, ಲಿಂಕ್ ಕೆನಾಲ್ ಮೂಲಕ ನೀರು ಹರಿಸಿ, ಕೆರೆಕಟ್ಟೆಗಳನ್ನು ತುಂಬಿಸಬೇಕು. ಇಲ್ಲವಾದಲ್ಲಿಬರುವ ನೀರು ಶಿಂಷಾ ನದಿಗೆ ಹರಿದು ಹೋಗಲಿದೆ ಎಂದರು.
ಲಿಂಕ್ ಕೆನಾಲ್ 388 ಕ್ಯೂಸೆಕ್ಸ್ ನೀರು ಹರಿಯು ಸಾಮರ್ಥ್ಯ ಹೊಂದಿದೆ. ಇದರಲ್ಲಿಶ್ರೀರಂಗ ಏತಾ ನೀರಾವರಿ ಯೋಜನೆ ಮೂಲಕ ಮಾಗಡಿಗೆ 167 ಕ್ಯೂಸೆಕ್ ಹಾಗೂ ಹುಲಿಯೂರುದುರ್ಗಕ್ಕೆ 250 ಕ್ಯೂಸೆಕ್ ನೀರು ಕೊಡಲಾಗುವುದೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಇವೆರಡೂ ಸೇರಿದ 417 ಕ್ಯೂಸೆಕ್ಸ್ ನೀರು ಹರಿಸಬೇಕಾಗುತ್ತದೆ. ಈ ಗೊಂದಲದ ಬಗ್ಗೆ ಅಧಿಕಾರಿಗಳು ಸ್ಪಷ್ಟನೆಗೆ ಆಗ್ರಹಿಸಿದರು.
ರೈತ ಸಂಘದ ಗೌರವಾಧ್ಯಕ್ಷ ರಾಮಣ್ಣ, ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ , ಪ್ರಧಾನ ಕಾರ ್ಯದರ್ಶಿ ಹೊಸರಂಗಯ್ಯನಪಾಳ್ಯ ವೆಂಕಟೇಶ್ , ಲಕ್ಷ್ಮಣ್ , ಮುಖಂಡರಾದ ರಿಯಾಜ್ , ಬಾಬು, ನೂರುಲ್ಲಾ, ಗಂಗರಾಜು, ಗೌರೀಶ್ , ರಂಗಸ್ವಾಮಯ್ಯ, ಪ್ರಕಾಶ್ ಇದ್ದರು.
12ಕುಣಿಗಲ್ 1: ಕುಣಿಗಲ್ ಪ್ರವಾಸಿ ಮಂದಿರದಲ್ಲಿರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.