ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಸಾವಿಗೆ ಕಾರಣವಾದ ಆರೋಪಿಗೆ 21 ವರ್ಷ ಜೈಲು

Contributed by: bhrahmanand.arali@timesofindia.com|Vijaya Karnataka•
court sentences accused to 21 years in prison for sexual assault leading to minors death
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ , ಸಾವಿಗೆ ಕಾರಣವಾದ ಆರೋಪಿಗೆ 21 ವರ್ಷ ಜೈಲು

ವಿಕ ಸುದ್ದಿಲೋಕ ಕಲಬುರಗಿ
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಗರ್ಭಧಾರಣೆ ಮತ್ತು ನಂತರದ ಸಾವಿಗೆ ಕಾರಣನಾದ ಅಪರಾಧಿಗೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯವು 21 ವರ್ಷಗಳ ಜೈಲು ಶಿಕ್ಷೆ ಹಾಗೂ 35,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಗಾಜಿಪೂರ ಬಡಾವಣೆಯ ನಿವಾಸಿ ಶುಭಂ ಅಲಿಯಾಸ್ ವರದಾ ದತ್ತು ಕಾಂಬಳೆ (20) ಶಿಕ್ಷೆಗೊಳಗಾದ ಅಪರಾಧಿ. ನಗರದ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವಾಸವಿದ್ದ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಹಾಗೂ ಸಾವಿಗೆ ಕಾರಣವಾದದ್ದು ಸಾಕ್ಷಿಗಳಿಂದ ರುಜುವಾತಾದ ಹಿನ್ನೆಲೆಯಲ್ಲಿಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಎಸ್ .ಎಲ…. ಚವ್ಹಾಣ್ ಅವರು ಆರೋಪಿಗೆ ಪೋಕ್ಸೊ ಕಾಯಿದೆ ಅಡಿ 21 ವರ್ಷ ಜೈಲು ಶಿಕ್ಷೆ ಮತ್ತು ನಾನಾ ಕಲಂ ಅಡಿ 35 ಸಾವಿರ ದಂದ ವಿಧಿಸಿ ಆದೇಶವನ್ನು ಗುರುವಾರ ನೀಡಿದ್ದಾರೆ. ತಿಂಗಳಲ್ಲಿನೊಂದ ಬಾಲಕಿಯ ಕುಟುಂಬಕ್ಕೆ 8 ಲಕ್ಷ ರೂ. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ತಿಂಗಳೊಳಗೆ ನೀಡುವಂತೆ ಆದೇಶದಲ್ಲಿತಿಳಿಸಿದ್ದಾರೆ.

ಎಂ.ಬಿ. ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಗಳಾದ ಶಿವಾನಂದ ಎಸ್ . ವಾಲೀಕಾರ ಮತ್ತು ಖಾಜಾ ಹುಸೇನ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ಸರಕಾರಿ ವಿಶೇಷ ಅಭಿಯೋಜಕ ಶಾಂತವಿರ ಬಿ.ತುಪ್ಪದ ವಾದ ಮಂಡನೆ ಮಾಡಿದ್ದರು.

**ಘಟನೆ ಹಿನ್ನೆಲೆ: ನಗರದ ಕಾಲೇಜೊಂದರಲ್ಲಿಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿ ಅಪ್ರಾಪ್ತೆಗೆ ಇನ್ ಸ್ಟಾಗ್ರಾಂ ಮೂಲಕ ಅಪರಾಧಿ ಪರಿಚಯ ಮಾಡಿಕೊಂಡಿದ್ದ. ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆರೋಪಿಯ ಕಾಟ ತಾಳಲಾರದೆ ಪೋಷಕರು ಬಾಲಕಿಯನ್ನು ಬೇರೆ ಕಾಲೇಜಿಗೆ ವರ್ಗಾಯಿಸಿದ್ದರು. ಆದರೂ ಆರೋಪಿ ತನ್ನ ಚಾಳಿ ಮುಂದುವರಿಸಿದ್ದ. 2024ರ ನ.5ರಂದು ಬಾಲಕಿಯನ್ನು ಕಾಲೇಜಿಗೆ ಹೋಗದಂತೆ ತಡೆದು, ಲಾಡ್ಜ್ ಒಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಘಟನೆಯಿಂದ ಬಾಲಕಿ ಗರ್ಭಿಣಿಯಾಗಿದ್ದು, 2025ರ ಜೂ.10ರಂದು ಹೆರಿಗೆ ವೇಳೆ ತಾಯಿ ಮತ್ತು ಮಗು ಮೃತಪಟ್ಟಿದ್ದರು.