ವಿಶ್ವ ಮಧುಮೇಹ ದಿನ (ನ.14) ಅಂಗವಾಗಿ ನಗರದ ಪಂಪ್ ವೆಲ್ ಸಮೀಪದ ಇಂಡಿಯಾನಾ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ ಸ್ಟಿಟ್ಯೂಟ್ ವತಿಯಿಂದ ವಿಶೇಷಮಧುಮೇಹ ತಪಾಸಣಾ ಪ್ಯಾಕೇಜ್ ನೀಡಲಾಗುತ್ತಿದೆ.ಸಾಮಾನ್ಯ ದರ 1,590 ಬದಲಾಗಿ ಈ ಪ್ಯಾಕೇಜ್ ನ್ನು 799ಕ್ಕೆ ಪಡೆಯಬಹುದು. ಈ ಕೊಡುಗೆ ನ.14ರಿಂದ ನ.30ರ ವರೆಗೆ ಲಭ್ಯವಿರುತ್ತದೆ.
ಮಧುಮೇಹ ತಪಾಸಣಾ ಪ್ಯಾಕೇಜ್ ನಲ್ಲಿಒಳಗೊಂಡಿರುವ ಪರೀಕ್ಷೆಗಳು ಹಾಗೂ ಸಮಾಲೋಚನೆ: ಫಾಸ್ಟಿಂಗ್ ಅಥವಾ ರಾರ ಯಂಡಮ್ ಬ್ಲಡ್ ಶುಗರ್ , ಎಚ್ ಬಿಎ1ಸಿ, ಸೀರಮ್ ಕ್ರಿಯಾಟಿನಿನ್ ,ಯೂರಿನ್ ರೂಟೀನ್ ಪರೀಕ್ಷೆ, ಮಧುಮೇಹ ತಜ್ಞರೊಂದಿಗೆ ಸಮಾಲೋಚನೆ, ಆಹಾರ ಪದ್ಧತಿ ಕುರಿತು ಸಮಾಲೋಚನೆ.
ಈ ತಪಾಸಣಾ ಪ್ಯಾಕೇಜ್ ರಕ್ತದಲ್ಲಿನ ಸಕ್ಕರೆಯ ಮಟ್ಟ ಪರಿಶೀಲಿಸಲು ಹಾಗೂ ಮಧುಮೇಹ ಮತ್ತು ಅದಕ್ಕೆ ಸಂಬಂಧಿಸಿದ ತೊಡಕುಗಳ ಅಪಾಯವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಸಹಾಯ ಮಾಡುತ್ತದೆ ಎಂದು ಪ್ರಕಟನೆ ತಿಳಿಸಿದೆ.