ಹಾಸ್ಟೆಲ್ ನಿರ್ಮಾಣಕ್ಕೆ ಭೂಮಿ ಪೂಜೆ

Contributed by: Beeresha M|Vijaya Karnataka•
earth worship for student hostel construction unique meeting in mysore
ವಿಕ ಸುದ್ದಿಲೋಕ ಮೈಸೂರು ಅಖಿಲ ಭಾರತ ಮಾಧ್ವ ಮಹಾಮಂಡಲದ ಮೈಸೂರು ಶಾಖೆಯು ಮೈಸೂರಿನಲ್ಲಿನಿರ್ಮಿಸುತ್ತಿರುವ ನೂತನ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ಪಲಿಮಾರು ಮಠದ ವಿದ್ಯಾದೀಶ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ವಿದ್ಯಾದೀಶ ತೀರ್ಥ ಸ್ವಾಮೀಜಿ ಮಾತನಾಡಿ, ‘‘ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ. ಇದರಿಂದ ಹಿಂದೂ ಸಮಾಜಕ್ಕೆ ಉತ್ತಮ ನಾಯಕರು ದೊರೆಯುತ್ತಾರೆ. ಹೀಗಾಗಿ ಸ್ನೇಹ, ಪ್ರೀತಿ, ಆತ್ಮೀಯತೆಯ ಬೀಜ ಬಿತ್ತುವ ಮೂಲಕ ಸಹೋದರ ಭಾವನೆ ಸ್ಥಾಪನೆಗೆ ನೂತನ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣವಾಗುತ್ತಿದೆ,’’ ಎಂದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ‘‘ಪ್ರತಿಯೊಬ್ಬ ಬ್ರಾಹ್ಮಣರು ಶಾಸ್ತಾ್ರಧ್ಯಯನ ಮಾಡಬೇಕು ಹಾಗೂ ಅದನ್ನು ಜೀವನದಲ್ಲಿಅನುಷ್ಠಾನಕ್ಕೆ ತರಬೇಕು. ಅದು ಸಾಧ್ಯವಾಗದಿದ್ದರೆ ಕನಿಷ್ಠ ಗಾಯತ್ರಿ ಮಂತ್ರಾನುಷ್ಠಾನವನ್ನಾದರು ಮಾಡಬೇಕು,’’ ಎಂದರು ‘‘ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗ ಬಾರದು ಎಂಬ ಕಾರಣಕ್ಕಾಗಿ 10 ಕೋಟಿ ರೂ.ವೆಚ್ಚದಲ್ಲಿನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ನೂತನ ಸಂಕೀರ್ಣವು 130 ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳೊಂದಿಗೆ ವಸತಿ ಕಲ್ಪಿಸುವ ಸಾಮರ್ಥ್ಯ ಹೊಂದಿರಲಿದೆ,’’ ಎಂದು ಮಾಹಿತಿ ನೀಡಿದರು. ಶಾಸಕ ಟಿ.ಎಸ್ .ಶ್ರೀವತ್ಸ ಮಾತನಾಡಿ, ‘‘ವಿದ್ಯಾರ್ಥಿ ನಿಲಯಕ್ಕೆ ಶಾಸಕರ ನಿಧಿಯಿಂದ 30 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 2 ಲಕ್ಷ ರೂ. ನೀಡುತ್ತೇನೆ. ನಮ್ಮ ಸಂಸ್ಕಾರ ಉಳಿಸುವ ಪ್ರಯತ್ನಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ಇತ್ತೀಚೆಗೆ ಸಂಸ್ಕೃತ ಕಲಿಯಲು ಹಲವರು ಪ್ರಯತ್ನಿಸುತ್ತಿರುವುದು ಧನಾತ್ಮಕ ವಿಚಾರ,’’ ಎಂದರು. ಪಲಿಮಾರು ಮಠದ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕಟ್ಟಡ ಸಮಿತಿ ಅಧ್ಯಕ್ಷ ವಾಸುದೇವ್ ಭಟ್ , ಉದ್ಯಮಿ ಡಾ. ಎಂ.ಜಗನ್ನಾಥ್ ಶೆಣೈ, ಅಖಿಲ ಭಾರತ ವಾಧ್ವ ಮಹಾಮಂಡಲ ಬೆಂಗಳೂರು ಶಾಖೆಯ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿ ಸುಂದ್ರ ವಾಸುದೇವ ಭಟ್ , ನಿಲಯದ ಅಧ್ಯಕ್ಷ ಪಿ.ಜಿ.ಸತ್ಯಪ್ರಕಾಶ್ , ಮಹಾಸಭಾದ ಮೈಸೂರು ಶಾಖೆ ಅಧ್ಯಕ್ಷ ಎಚ್ .ವಿ.ಗೌತಮ ಇದ್ದರು.