ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಗುಂಪುಗೂಡಿ, ಪೊಲೀಸರ ಸೂಚನೆಗೆ ಮಣಿಯದೆ ಘರ್ಷಣೆ ನಡೆಸಿದ ಆರೋಪದ ಮೇರೆಗೆ ಬಂಟ್ವಾಳದ ವ್ಯಕ್ತಿಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.ತಮ್ಮ ವಿರುದ್ಧ ಬಂಟ್ವಾಳದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿನಡೆಯುತ್ತಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಫಾರೂಕ್ ಮುಗುಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ‘‘ಪ್ರಕರಣದಲ್ಲಿಕೇವಲ ನಿಷೇಧಾಜ್ಞೆ ಉಲ್ಲಂಘಿಘಿಸಿ ಗುಂಪು ಸೇರಿದ ಆರೋಪ ಮಾತ್ರವಲ್ಲ. ಪೊಲೀಸರು ಚದುರುವಂತೆ ಸೂಚಿಸಿದರೂ ನಿರಾಕರಿಸಿ, ಕಾನೂನು ಪಾಲನೆಗೆ ಅಡ್ಡಿಪಡಿಸಿ ಹಿಂಸಾಚಾರದಲ್ಲಿತೊಡಗಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿಆರೋಪಿಯು ಗುಂಪಿನ ಸಮಾನ ಉದ್ದೇಶದಲ್ಲಿಭಾಗಿಯಾಗಿದ್ದರೆ ಅಥವಾ ಇಲ್ಲವೇ ಎಂಬುದನ್ನು ವಿಚಾರಣಾ ನ್ಯಾಯಾಲಯದಲ್ಲಿಸಾಕ್ಷ್ಯಾಧಾರಗಳ ಮೂಲಕವೇ ನಿರ್ಧರಿಸಬೇಕಾಗುತ್ತದೆ,’’ ಎಂದು ನ್ಯಾಯಪೀಠ ಹೇಳಿದೆ.
ಈ ನಡುವೆ, ‘‘ವಿಚಾರಣೆ ವೇಳೆ ಎಲ್ಲರೀತಿಯ ರಕ್ಷಣಾತ್ಮಕ ವಾದ ಮಂಡಿಸಲು ಅರ್ಜಿದಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿರಲಿದೆ,’’ ಎಂದು ಅಭಿಪ್ರಾಯಪಟ್ಟಿರುವ ಪೀಠ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ:
2018ರ ಮೇ 19ರಂದು ಅಂದಿನ ಮುಖ್ಯಮಂತ್ರಿ ವಿಧಾನಸಭೆಯಲ್ಲಿಬಹುಮತ ಸಾಬೀತುಪಡಿಸಿದ ಹಿನ್ನೆಲೆಯಲ್ಲಿಮುನ್ನೆಚ್ಚರಿಕಾ ಕ್ರಮವಾಗಿ ವಿಟ್ಲಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಸಿಆರ್ ಪಿಸಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ವೇಳೆ, ಅರ್ಜಿದಾರ ಫಾರೂಕ್ ಮತ್ತಿತರರು ಬೈಕ್ ಗಳಲ್ಲಿಬಂದು ಒಂದು ರಾಜಕೀಯ ಪಕ್ಷದ ಪರ ಘೋಷಣೆಗಳನ್ನು ಕೂಗಿದ್ದರು. ಅದೇ ಸಮಯಕ್ಕೆ ಎದುರಾಳಿ ಪಕ್ಷದ ಬೆಂಬಲಿಗರೂ ಅಲ್ಲಿಜಮಾಯಿಸಿ ಘೋಷಣೆಗಳನ್ನು ಕೂಗಲಾರಂಭಿಸಿದ್ದರು.
ಸ್ಥಳದಲ್ಲಿದ್ದ ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿರುವ ಬಗ್ಗೆ ಮಾಹಿತಿ ನೀಡಿ, ಗುಂಪು ಚದುರುವಂತೆ ಸೂಚಿಸಿದ್ದರು. ಆದರೆ, ಎರಡೂ ಗುಂಪುಗಳು ಪೊಲೀಸರ ಮಾತಿಗೆ ಕಿವಿಗೊಡದೆ ಲಾಠಿ ಹಾಗೂ ಇತರ ವಸ್ತುಗಳಿಂದ ಪರಸ್ಪರ ಹಲ್ಲೆನಡೆಸಿದ್ದವು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎಂದು ದೂರಿನಲ್ಲಿಆರೋಪಿಸಲಾಗಿದೆ. ಈ ಸಂಬಂಧ ವಿಟ್ಲಪೊಲೀಸರು ಎಫ್ ಐಆರ್ ದಾಖಲಿಸಿ, ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.