ಜುಂಜಪ್ಪಸ್ವಾಮಿ ಜಾತ್ರೆ ಸಂಪನ್ನ

Contributed by: shekargraphics1@gmail.com|Vijaya Karnataka•
junjappa swami festival a grand celebration
ಜುಂಜಪ್ಪಸ್ವಾಮಿ ಜಾತ್ರೆ ಸಂಪನ್ನ

ಚಿಕ್ಕನಾಯಕನಹಳ್ಳಿ: ಕಾರ್ತೀಕಮಾಸದ ಅಂಗವಾಗಿ ತಾಲೂಕಿನ ಗೋಡೆಕೆರೆ ಹತ್ತಿರದ ಶ್ರೀ ಜುಂಜಪ್ಪಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ದಿಪೋತ್ಸವ ಅದ್ದೂರಿಯಾಗಿ ನಡೆಯಿತು.
ಜುಂಜಪ್ಪನ ಕ್ಷೇತ್ರಕ್ಕೆ ನಡುವನಹಳ್ಳಿ ಕರಿಯಮ್ಮದೇವಿ, ಬಾಣದೇವರಟ್ಟಿ, ಬೇವಿನಹಳ್ಳಿ, ಅಮ್ಮ ಬೇವಿನಹಳ್ಳಿ ಕರಿಯಮ್ಮ ದೇವಿ ಆಗಮಿಸಿ. ಸುತ್ತಮುತ್ತಲಿನ ಹಳ್ಳಿಗಳಿಂದ ಮಹಿಳೆಯರು ಆರತಿ ಸೇವೆ ಸಲ್ಲಿಸಿದರು. ಜಾತ್ರೆ ಅಂಗವಾಗಿ ತಿಪಟೂರಿನ ಶ್ರೀ ವಿN್ನೕಶ್ವರ ಕೃಪಾ ಪೋಷಿತ ಎನ್ ಆರ್ ಎಂಎಲ್ ಮಹಿಳಾ ಕಲಾವಿದರಿಂದ ಧರ್ಮರಾಜ್ಯ ಸ್ಥಾಪನೆ ಅಥವಾ ಕುರುಕ್ಷೇತ್ರ ಪೌರಿಣಿಕ ನಾಟಕ ಪ್ರದರ್ಶನ ನಡೆಯಿತು. ಜಾನಪದ ಕಲಾತಂಡಗಳು ಹಾಗೂ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಉತ್ಸವ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಧಾರ್ಮಿಕ ಕಾರ ್ಯಕ್ರಮದಲ್ಲಿಶಾಸಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.

12 ಸಿಎನ್ ಹಳ್ಳಿ: ಜುಂಜಪ್ಪಸ್ವಾಮಿ