ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ವಿಚಾರದಲ್ಲಿಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಶಾಸಕ ಕೆ.ವೆಂಕಟೇಶ್ ಆರೋಪಿಸಿದ್ದಾರೆ.
ತಾಲೂಕಿನ ಚಿಟ್ಟೆನಳ್ಳಿ ಗ್ರಾಮದಲ್ಲಿಹಮ್ಮಿಕೊಂಡಿದ್ದ ಭಾರತ್ ಜೋಡೋ ಯುವಕರ ಸಂಘದ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಎಚ್ .ಡಿ.ಕುಮಾರಸ್ವಾಮಿ ಅವರೇ ಸ್ಟಿಂಗ್ ಆಪರೇಷನ್ ಮಾಡಿಸಿದ್ದು, ರಾಜ್ಯ ರಾಜಕಾರಣ ಹಾಳು ಮಾಡುತ್ತಿದ್ದಾರೆ. ಅವರಿಗೆ ಒಕ್ಕಲಿಗರಲ್ಲಿಇತರೆ ಯಾರೂ ಬೆಳೆಯಬಾರದು ಎಂಬ ಅಸೂಯೆ ತುಂಬಿದೆ. ಈ ಕಾರಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಗ್ಗೆ ನಿತ್ಯ ಸಲ್ಲದ ಸುಳ್ಳು ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಈ ರೀತಿ ಬುರುಡೆ ಹೊಡಿಯುವವರಿಗೆ ಮತ ನೀಡಬೇಡಿ,’’ ಎಂದು ಮನವಿ ಮಾಡಿದರು.
‘‘ರಾಜ್ಯದಲ್ಲಿಬೆಲೆ ಏರಿಕೆ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡುತ್ತ ಜನರ ದಿಕ್ಕು ತಪ್ಪಿಸುತ್ತಿದೆ. ರಾಜ್ಯ ಸರಕಾರ ಹಾಲು ಮತ್ತು ಬಸ್ಸಿನ ದರ ಏರಿಕೆ ಮಾಡಿದೆ ಎಂದು ದೂರುತ್ತಾರೆ. ಆದರೆ, ಈ ಬೆಲೆ ಏರಿಕೆಯಿಂದ ರೈತರು ಆರ್ಥಿಕ ಸದೃಢರಾಗಿದ್ದಾರೆ. ಇಂದು ಕೇಂದ್ರ ಸರಕಾರವು ಪೆಟ್ರೋಲ…, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು,’’ ಎಂದು ಹೇಳಿದರು.
‘‘ಈ ಹಿಂದೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿ ಬಿಜೆಪಿ ಆಡಳಿತದಿಂದ ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಕಾಂಗ್ರೆಸ್ ಸಂವಿಧಾನದಡಿಯಲ್ಲಿಕೆಲಸ ನಿರ್ವಹಿಸುತ್ತಿದೆ. ಪ್ರತಿಯೊಬ್ಬರಲ್ಲಿಯೂ ಸಮಾನತೆ, ಭ್ರಾತೃತ್ವ ಭಾವನೆ ಮೂಡಿಸುವ ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಅವರು ಪ್ರತಿ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂ. ನೀಡಿ ಮಹಿಳೆಯರು ಸೇರಿದಂತೆ ಜಾತ್ಯತೀತ ಸಂಘವನ್ನು ಸ್ಥಾಪಿಸಲು ಸೂಚಿಸಿದ್ದಾರೆ. ಇದರ ಮೂಲಕ ಸಾಂಸ್ಕೃತಿಕ ಕಾರ್ಯ, ಸಮಾಜ ಸೇವೆ ಕಾರ್ಯಕ್ರಮ ಮಾಡಬೇಕು,’’ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್ , ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ನಿರ್ದೇಶಕ ರೆಹಮತ್ ಜಾನ್ ಬಾಬು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಮುಖಂಡರಾದ ಡಿ.ಟಿ.ಸ್ವಾಮಿ, ಅನಿಲ್ ಕುಮಾರ್ , ಬಸವರಾಜ…, ನವೋದಯ ನಾರಾಯಣ್ , ಪಿ.ವಿ.ರವಿ, ಪುಟ್ಟರಾಜು ಶಂಕರೇಗೌಡ, ಮಹದೇವ್ ಹೆಮ್ಮಿಗೆ, ರಘು, ದಿನೇಶ್ , ಶಂಕರ್ , ಮುನಿಯಪ್ಪ, ಪಿಡಿಒ ಮಂಜುನಾಥ್ ಇದ್ದರು.
ಪೋಟೋ ಇದೆ
ತಾಲೂಕಿನ ಚಿಟ್ಟೆನಳ್ಳಿ ಗ್ರಾಮದಲ್ಲಿಹಮ್ಮಿಕೊಂಡಿದ್ದ ಭಾರತ್ ಜೋಡೋ ಯುವಕರ ಸಂಘದ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿಶಾಸಕ ಕೆ.ವೆಂಕಟೇಶ್ ಮಾತನಾಡಿದರು.