ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿದೀಪಾವಳಿ ಪ್ರಯುಕ್ತ ಸಾಮೂಹಿಕ ಗೋಪೂಜಾ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಿತು.ದೇವಳದ ಪರ್ಯಾಯ ಅರ್ಚಕರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಇವರ ನೇತೃತ್ವದಲ್ಲಿಹರೇರಾಮ ಉಪಾಧ್ಯಾಯ ಅವರಿಂದ ದೇವಳದ ಗೋಕುಟೀರದ ಗೋವುಗಳಿಗೆ ವಿಶೇಷ ನೈವೇದ್ಯವನ್ನು ಸಮರ್ಪಿಸುವುದರ ಮೂಲಕ ಗೋಪೂಜೆಯನ್ನು ನೆರವೇರಿಸಲಾಯಿತು.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಕುಂದಾಪುರ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಹೆಗ್ಡೆ, ಕಂಡ್ಲೂರು ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಮಾಚ ಬಿಲ್ಲವ, ನಿವೃತ್ತ ಜಾನುವಾರು ಅಧಿಕಾರಿ ಡಾ.ಎಚ್ .ಸುಬ್ರಾಯ ಗಾಣಿಗ, ಡಾ.ರಾಜೀವ ಶೆಟ್ಟಿ ಕುಂಭಾಸಿ, ದೇವಳದ ಆಡಳಿತ ಕಛೇರಿ ಹಾಗೂ ಅರ್ಚಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ದೇವಳದಲ್ಲಿನೆರೆದಿದ್ದ ನೂರಾರು ಮಂದಿ ಭಕ್ತರು ಭಕ್ತಿ ಭಾವದಿಂದ ಸಾಮೂಹಿಕ ಗೋಪೂಜೆಯಲ್ಲಿಪಾಲ್ಗೊಂಡು ಕೃತಾರ್ಥರಾದರು.
ಪೋಟೋ//11ಎಬಿ-ಎಎನ್ ಎ// ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿದೀಪಾವಳಿ ಪ್ರಯುಕ್ತ ಸಾಮೂಹಿಕ ಗೋಪೂಜಾ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಿತು.