ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ, ಶಿಕ್ಷಣಕ್ಕಾಗಿ ಸರಕಾರ ನೀಡುವ ಉಚಿತ ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.ಪಟ್ಟಣದ ತಾಲೂಕು ಶಾಲೆಯ ಆವರಣದಲ್ಲಿ3.88 ಕೋಟಿ ವೆಚ್ಚದ 10 ಶಾಲಾ ಕೊಠಡಿ ಹಾಗೂ 2 ಸಭಾಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ‘‘ಸರಕಾರದಿಂದ ಹಣ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಧಾರವಾಡದ ಬಿಲ್ಡ್ ಕ್ವಾನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ,’’ ಎಂದರು.
ಪ್ರಭಾರಿ ಬಿಇಒ ಬಸವರಾಜ ಕಾಂಬಳೆ, ಎಸ್ ಡಿಎಂಸಿ ಅಧ್ಯಕ್ಷ ಅಜೀಂ ಮುಲ್ಲಾ, ಮುಖ್ಯೋಪಾಧ್ಯಾಯ ಎಂ.ಬಿ. ಪಠಾಣ, ಎಂ.ಬಿ. ಹಡಾಡಿ, ನಿಂಗಪ್ಪ ಮಠದಕರ, ಐ.ಬಿ. ಚಮನಮಲ್ಲಿಕ, ಬಿ.ಎಸ್ . ಮುತ್ತೂರ, ರಾಜು ಕುರಾಡೆ, ದೇವಾನಂದ ಮಾಡಲಗಿ, ಸದಾಶಿವ ಘೋರ್ಪಡೆ, ಮಹೇಶ ಕರಮಡಿ, ಸದಾನಂದ ಹಳಿಂಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಧಿ-11ರಾಯಬಾಗ1
ರಾಯಬಾಗ ಪಟ್ಟಣದ ತಾಲೂಕು ಶಾಲೆಯ ಆವರಣದಲ್ಲಿಶಾಲಾ ಕೊಠಡಿಗಳು ಹಾಗೂ ಸಭಾಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಶಂಕುಸ್ಥಾಪನೆ ನೆರವೇರಿಸಿದರು.