ಮುಸ್ಲಿಂ ಮುಖಂಡರಿಂದ ವಿಧಾನ ಮಂಡಲ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಭೇಟಿ

Contributed by: santhoshshetty48@gmail.com|Vijaya Karnataka•
muslim leaders meet with legislative assembly to review welfare schemes for minorities and backward classes
ವಿಕ ಸುದ್ದಿಲೋಕ ಗೋಳಿಯಂಗಡಿ

ಉಡುಪಿ ಜಿಲ್ಲೆಗೆ ಇಲಾಖೆಯ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿರುವ ಕರ್ನಾಟಕ ವಿಧಾನ ಮಂಡಲದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಾಸಕ ತನ್ವೀರ್ ಸೇಠ್ ಮತ್ತು ಸಮಿತಿ ಸದಸ್ಯ ವಿಠಲ್ ದೊಂಡಿಬಾ, ಶಾಸಕ ಇಕ್ಬಾಲ್ ಹುಸೇನ್ , ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಅಧ್ಯಕ್ಷ, ಪ್ರಧಾನ ಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಉಡುಪಿ ಜಿಲ್ಲಾಸದಸ್ಯ ನಕ್ವಾ ಯಾಹ್ಯ ನೇತೃತ್ವದಲ್ಲಿಉಡುಪಿ ಜಿಲ್ಲೆಯ ಮುಸ್ಲಿಂ ಮುಖಂಡರು ಭೇಟಿ ನೀಡಿ ಗೌರವಿಸಿದರು.
ಉಡುಪಿ ಜಿಲ್ಲೆಯಲ್ಲಿಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ತ್ವರಿತ ಮಂಜೂರಾತಿ, ವಕ್ಪ್ ಬೋರ್ಡ್ ಯೋಜನೆಗಳ ಮಂಜೂರಾತಿ ಹಾಗೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಪ್ರಸ್ತಾಪಿಸಲಾಯಿತು.

ಎನ್ .ಎಸ್ . ಅಕಾಡೆಮಿ ಕಾರ್ಕಳ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಎನ್ ಎನ್ ಒ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರು ಸಾಹೇಬ್ ಉಡುಪಿ, ಉಡುಪಿ ಜಿಲ್ಲಾಮುಸ್ಲಿಂ ಒಕ್ಕೂಟ ಅಧ್ಯಕ್ಷ ಮೊಹಮ್ಮದ್ ಮೌಲಾ, ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಸಂಯೋಜಕ ಯಾಸಿನ್ ಹೆಮ್ಮಾಡಿ, ಇಸ್ಮಾಯಿಲ್ ಆತ್ರಾಡಿ, ಜಿಲ್ಲಾಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶೇಖ್ ಸರ್ಫುದ್ದೀನ್ , ಯೂಸುಫ್ ಕಾಪು ಇನ್ನಿತರರು ಉಪಸ್ಥಿತರಿದ್ದರು.

ಫೋಟೋ: ಕರ್ನಾಟಕ ವಿಧಾನ ಮಂಡಲದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಅಧ್ಯಕ,್ಷ ಶಾಸಕ ತನ್ವೀರ್ ಸೇಠ್ ಮತ್ತು ಸಮಿತಿ ಸದಸ್ಯ,ವಿಧಾನಸಭಾ ಸದಸ್ಯ ವಿಠಲ್ ದೊಂಡಿಬಾ,ಶಾಸಕ ಇಕ್ಬಾಲ್ ಹುಸೇನ್ ,ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಉಡುಪಿ ಜಿಲ್ಲೆಯ ಮುಸ್ಲಿಂ ಮುಖಂಡರು ಭೇಟಿ ನೀಡಿ ಗೌರವಿಸಿದರು.

ಫೋಟೋ ಫೈಲ್ ನೇಮ್ :10 ಗೋಳಿಯಂಗಡಿ 2 ಉಡುಪಿ