ನಂಜನಗೂಡು ಡ್ರಗ್ಸ್ ಪ್ರಕರಣ ಗೃಹ ಇಲಾಖೆ ಏನು ಮಾಡುತ್ತಿದೆ? ಮೈಸೂರು : ನಂಜನಗೂಡು ಸಮೀಪ ತೋಟವನ್ನು ಭೋಗ್ಯಕ್ಕೆ ಪಡೆದು ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಕೇರಳ ಮೂಲದ ಡ್ಯಾನಿಷ್ ಎಂಬಾತನ ಬಳಿ ಮಾದಕ ವಸ್ತು ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಹಾಗೂ ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಪ್ರಶ್ನಿಸಿದ್ದಾರೆ. ‘‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಬೆಲವತ್ತದ ಸಮೀಪ ಡ್ರಗ್ಸ್ ಪತ್ತೆಯಾಗಿತ್ತು. ಬೇರೆ ರಾಜ್ಯದಿಂದ ಬಂದವರು ಇಲ್ಲಿಡ್ರಗ್ಸ್ ದಂಧೆ ನಡೆಸುತ್ತಿದ್ದರು. ಆಗ ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದರು. ಇದೀಗ ನಂಜನಗೂಡಿನಲ್ಲಿಪತ್ತೆ ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿದೆ. ಮೇಲಿಂದ ಮೇಲೆ ಡ್ರಗ್ಸ್ ದಂಧೆ ಮೈಸೂರಿನಲ್ಲಿನಡೆಯುತ್ತಿದ್ದರೂ ರಾಜ್ಯದಲ್ಲಿಗೃಹ ಇಲಾಖೆ ಏನು ಮಾಡುತ್ತಿದೆ? ಪೊಲೀಸರು ಯಾಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ,’’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ‘‘ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಬೇಡದ ಎಲ್ಲಾವಿಚಾರಕ್ಕೂ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ, ಮೈಸೂರಿನಲ್ಲಿಡ್ರಗ್ಸ್ ಜಾಲ ಬೇರು ಬಿಟ್ಟಿದ್ದರೂ ಏಕೆ ಅವರಿಂದ ಇನ್ನೂ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬೇರೆ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ದಾಳಿ ನಡೆಸಿ ಪ್ರಕರಣ ಬಯಲಿಗೆ ಎಳೆಯುತ್ತಿದ್ದಾರೆ. ಆದರೆ, ರಾಜ್ಯದ ಗುಪ್ತಚರ ಇಲಾಖೆ ಸತ್ತು ಹೋಗಿದೆಯೇ? ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೇ?,’’ ಎಂದು ಬೇಸರ ವ್ಯಕ್ತಪಡಿಸಿದರು. ‘‘ಮೈಸೂರು ಸಾಂಸ್ಕೃತಿಕ ನಗರಿ. ವಿದ್ಯಾಕಾಶಿ. ದೇಶದಲ್ಲೇ ರಾಜರ ಊರು ಹೆಸರುವಾಸಿಯಾಗಿದೆ. ಇಂತಹ ಊರಿನಲ್ಲಿಡ್ರಗ್ಸ್ ಹಾವಳಿ ದಿನೇದಿನೆ ಹಬ್ಬುತ್ತಿರುವ ರೀತಿ ನೋಡಿದರೆ ಭಯವಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಡ್ರಗ್ಸ್ ಮುಕ್ತ ಮೈಸೂರು ಡ್ರಗ್ಸ್ ಮುಕ್ತ ಕರ್ನಾಟಕ ಆಗಲು ಗೃಹ ಇಲಾಖೆ ಸಚಿವರು ಶ್ರಮಿಸಬೇಕು. ಆ ಮೂಲಕ ಪಾಲಕರು ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು,’’ ಎಂದು ಮನವಿ ಮಾಡಿದ್ದಾರೆ.