ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿಸ್ವಾಸ್ಥ್ಯ ಸಂಕಲ್ಪ

Contributed by: bkyashas2010@gmail.com|Vijaya Karnataka•
success of health resolution program at alankaru shri bharati educational institution
ವಿಕ ಸುದ್ದಿಲೋಕ ಕಡಬ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ನೇತೃತ್ವದಲ್ಲಿಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಲಂಕಾರು ಶ್ರೀಭಾರತಿ ವಿದ್ಯಾಸಂಸ್ಥೆಯಲ್ಲಿನಡೆಯಿತು.
ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಸುರೇಶ್ ಕುಮಾರ್ ಕೂಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಸ್ಥ ್ಯ ಸಂಕಲ್ಪ ಕಾರ್ಯಕ್ರಮಗಳು ಇಂದು ಯುವಜನತೆಗೆ ಅಗತ್ಯವಿದ್ದು, ಮಕ್ಕಳು ಆರೋಗ್ಯವಂತರಾಗಿ ಇರಬೇಕಾದಲ್ಲಿನಾವು ಪ್ರತಿನಿತ್ಯ ಯೋಗ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಸಂಪನ್ಮೂಲ ವ್ಯಕಿ, ನ್ಯಾಯವಾದಿ ಮನೋಹರ ಎ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಜತೆಗೆ ರಾಮಾಯಣ, ಮಹಾಭಾರತ ಪುರಾಣಗಳ ಜ್ಞಾನ ಬೆಳೆಸಿಕೊಳ್ಳಬೇಕು, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಒತ್ತನ್ನು ನೀಡಿದಾಗ ಸಮಾಜದ ಬದಲಾವಣೆಗೆ ಪೂರಕವಾಗಬಹುದು. ವಿದ್ಯಾರ್ಥಿಗಳು ಪೋಷಕರನ್ನು ಗೌರವ, ಪ್ರೀತಿಯಿಂದ ನೋಡಿಕೊಂಡಾಗ ಅವರು ಕಲಿತ ವಿದ್ಯೆಗೆ ಮತ್ತಷ್ಟು ಹೊಳಪು ನೀಡಿದಂತೆ ಆಗುತ್ತದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಇಂದುಶೇಖರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶ್ರೀಭಾರತಿ ವಿದ್ಯಾಸಂಸ್ಥೆಯ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯ ಸದಸ್ಯೆ ಮಮತಾ ಅಂಬರ್ಜೆ, ಶ್ರೀಭಾರತಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಮುಖ್ಯಶಿಕ್ಷಕ ಸತೀಶ್ ಕುಮಾರ್ ಜಿ.ಆರ್ ., ಕನ್ನಡ ಮಾಧ್ಯಮ ಪ್ರಭಾರ ಮುಖ್ಯಶಿಕ್ಷಕಿ ವೇದಾವತಿ ಉಪಸ್ಥಿತರಿದ್ದರು. ದ್ಯುತಿ ಎಚ್ . ಕೆ. ಪ್ರಾರ್ಥಿಸಿದರು. ಸೇವಾಪ್ರತಿನಿಧಿ ಪ್ರೇಮಾವತಿ ಸ್ವಾಗತಿಸಿದರು. ಶಿಕ್ಷಕಿ ಸುಕನ್ಯಾ ವಂದಿಸಿದರು. ಆಲಂಕಾರು ವಲಯದ ಮೇಲ್ಚಿಚಾರಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

ಡಾ. ಸುರೇಶ್ ಕುಮಾರ್ ಕೂಡೂರು ಕಾರ್ಯಕ್ರಮ ಉದ್ಘಾಟಿಸಿದರು. ಫೊಟೋ....11ಕೆಡಿಬಿ ಯುಜಿ