ಮದ್ಯ ಮಾರಾಟ: ಪ್ರಕರಣ ದಾಖಲು

Contributed by: pramod.harikant@timesofindia.com|Vijaya Karnataka•
woman caught in liquor sales operation by police
ಕಾರವಾರ: ಪರವಾನಗಿ ಪಡೆಯದೆ ಅಂಗಡಿ ಪಕ್ಕದ ಶೆಡ್ ನಲ್ಲಿಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಇಲ್ಲಿಯ ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಅಮದಳ್ಳಿಯ ಹಳೆ ಮುದಗಾ ನಿವಾಸಿ ವ್ಯಾಪಾರಿ ಕಲ್ಪನಾ ಉಲ್ಲಾಸ ತೆಂಡೂಲ್ಕರ್ (58) ವಿರುದ್ಧ ಪ್ರಕರಣ ದಾಖಲಾಗಿದೆ. ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ಅರ್ಧ ಖಾಲಿಯಾದ 180 ಎಂ.ಎಲ್ .ನ ಎರಡು ವಿಸ್ಕಿ ಪೌಚ್ ಗಳು, ಒಂದು ಪ್ಲಾಸ್ಟಿಕ್ ಗ್ಲಾಸ್ ಹಾಗೂ ಅರ್ಧ ತುಂಬಿದ ನೀರಿನ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.