ವಿಕ ಸುದ್ದಿಲೋಕ ಹೂವಿನಹಡಗಲಿಕೆಆರ್ ಎಸ್ ಕಾರ್ಯಕರ್ತ ಚಂದ್ರಶೇಖರ ದೊಡ್ಮನಿ ಮೇಲೆ ನಡೆಸಿದ ಹಲ್ಲೆಖಂಡಿಸಿ ಪಕ್ಷದ ರಾಜ್ಯ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿಪಟ್ಟಣದಲ್ಲಿಸೋಮವಾರ ಪ್ರತಿಭಟಿಸಲಾಯಿತು.
ಇಲ್ಲಿನ ಮೈಲಾರ ಲಿಂಗೇಶ್ವರ ದೇಗುಲದಿಂದ ಮುಖ್ಯ ಬೀದಿ ಮೂಲಕ ಪ್ರತಿಭಟನಾ ರಾರ ಯಲಿ ಹೊರಟು ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ತಲುಪಿತು. ಬಳಿಕ ಮಾತನಾಡಿದ ರವಿಕೃಷ್ಣಾರೆಡ್ಡಿ, ‘‘ತಾಲೂಕಿನಲ್ಲಿನಡೆಯುತ್ತಿರುವ ಅಕ್ರಮ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದುಷ್ಕರ್ಮಿಗಳು ತಮ್ಮ ಪಕ್ಷದ ಕಾರ್ಯಕರ್ತ ಚಂದ್ರಶೇಖರ ದೊಡ್ಮನಿ ಮೇಲೆ ಮಾರಣಾಂತಿಕ ಹಲ್ಲೆನಡೆಸಿದ್ದಾರೆ. ಸುಳ್ಳು ದೂರುಗಳ ಮೇಲೆ ಇಬ್ರಾಹಿಂ ಸೇರಿದಂತೆ ಇತರರ ವಿರುದ್ಧ ಪ್ರಾಥಮಿಕ ತನಿಖೆಯನ್ನು ನಡೆಸದೇ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿಶಾಸಕ ಕೃಷ್ಣನಾಯ್ಕ ಹಿಂಬಾಲಕರಿದ್ದಾರೆ. ಜತೆಗೆ ಮಾಜಿ ಶಾಸಕರ ಅಧಿಕಾರ ದುರ್ಬಳಕೆಯೂ ನಡೆದಿದೆ. ಕನಿಷ್ಠ ಸೌಜನ್ಯಕ್ಕಾದರೂ ಪ್ರಜಾಪ್ರಭುತ್ವದ ಪ್ರಜ್ಞೆ ಇರಬೇಕು,’’ ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.
ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್ ., ‘‘ಅಕ್ರಮ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಕೆಆರ್ ಎಸ್ ಮುಖಂಡರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ಆದ್ದರಿಂದ ಚಂದ್ರಶೇಖರ ದೊಡ್ಡಮನಿ ಮೇಲೆ ಹಲ್ಲೆನಡೆಸಿದ ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು.
ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷ ವರುಣ್ ತೋರಣಗಟ್ಟೆ, ಜಿಲ್ಲಾಪ್ರಧಾನ ಕಾರ್ಯದರ್ಶಿ ಪ.ಯ.ಗಣೇಶ, ರಘು ಜಾಣಗೆರೆ, ಬಂಜಾರ ಸಮಾಜದ ತಾಲೂಕಾಧ್ಯಕ್ಷ ಶ್ರೀಧರನಾಯ್ಕ ಇತರರು ಮಾತನಾಡಿದರು. ಬಳಿಕ ಉಪತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಚಿತ್ರ:ವಿಎನ್ ಆರ್ 16ಎಚ್ ಡಿಎಲ್ ಪಿ1-ಹೂವಿನಹಡಗಲಿಯಲ್ಲಿಕೆಆರ್ ಎಸ್ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಖಂಡಿಸಿ ಪಕ್ಷದ ರಾಜ್ಯ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿಸೋಮವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.