ಕರ್ಣಾಟಕ ಬ್ಯಾಂಕ್ ಎಂಡಿಯಾಗಿ ಬಿಜಿ ಎಸ್ .ಎಸ್ .

Contributed by: mahammed.arif@timesofindia.com|Vijaya Karnataka•
bg ss appointed as the new md of karnataka bank
ವಿಕ ಸುದ್ದಿಲೋಕ ಮಂಗಳೂರು

ಕರ್ಣಾಟಕ ಬ್ಯಾಂಕ್ ನ ನೂತನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಬಿಜಿ ಶ್ರೀಕೃಷ್ಣವಿಲಾಸ ಶಂಕರನಾರಾಯಣನ್ ಅವರನ್ನು ಮಧ್ಯಂತರ ಅವಧಿಗೆ ನೇಮಕ ಮಾಡಲಾಗಿದೆ.
ಈ ನೇಮಕಾತಿಯು 2026ರ ನ.16ರಿಂದ ಜಾರಿಗೆ ಬಂದಿದ್ದು, ಈ ಆದೇಶವು ಎರಡು ತಿಂಗಳ ಅವಧಿಗೆ ಅಥವಾ ಪೂರ್ಣಾವಧಿಯ/ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಅಧಿಕಾರ ವಹಿಸಿಕೊಳ್ಳುವ ದಿನಾಂಕದವರೆಗೆ ಜಾರಿಯಲ್ಲಿರುತ್ತದೆ. ಬಿಜಿ ಎಸ್ .ಎಸ್ . ಅವರ ಪರಿಣತಿ ಮತ್ತು ನಾಯಕತ್ವವು ಬ್ಯಾಂಕನ್ನು ನಿರಂತರ ಬೆಳವಣಿಗೆ ಮತ್ತು ಯಶಸ್ಸಿನತ್ತ ಕೊಂಡೊಯ್ಯಲಿದೆ ಎಂದು ಕರ್ಣಾಟಕ ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಸ್ತುತ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿಜಿ ಅವರು, ದಕ್ಷಿಣ ಭಾರತದ ಬ್ಯಾಂಕಿಂಗ್ ವಲಯದಲ್ಲಿ31 ವರ್ಷಗಳ ಸುದೀರ್ಘ ಅನುಭವ ಹೊಂದಿರುವ, ಬ್ಯಾಂಕಿಂಗ್ ರಂಗದ ಸಮರ್ಥ ನಾಯಕಿಯಾಗಿದ್ದಾರೆ.

ಕಾರ್ಪೊರೇಟ್ ಬ್ಯಾಂಕಿಂಗ್ , ರಿಟೇಲ್ ಮತ್ತು ಶಾಖಾ ಬ್ಯಾಂಕಿಂಗ್ , ಹೊಣೆಗಾರಿಕೆಗಳು, ಸುರಕ್ಷಿತ ಆಸ್ತಿಗಳು, ವ್ಯವಸ್ಥೆಯ ಪರಿವರ್ತನೆ ಮತ್ತು ಡಿಜಿಟಲ್ ಆಧುನೀಕರಣದಂತಹ ಕ್ಷೇತ್ರಗಳಲ್ಲಿವ್ಯಾಪಕ ಅನುಭವ ಹೊಂದಿದ್ದಾರೆ.

ಬಿಜಿ ಎಸ್ .ಎಸ್ . ಅವರು ರಾಷ್ಟ್ರವ್ಯಾಪಿ ಬ್ಯಾಂಕಿಂಗ್ ಜಾಲಗಳನ್ನು ಸ್ವತಂತ್ರ ಲಾಭದಾಯಕ ಘಟಕಗಳಾಗಿ ಮುನ್ನಡೆಸುವಲ್ಲಿ, ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗಗಳನ್ನು ವಿಸ್ತರಿಸುವಲ್ಲಿ, ಅಪಾಯ ನಿರ್ವಹಣಾ ಚೌಕಟ್ಟುಗಳನ್ನು ಬಲಪಡಿಸುವಲ್ಲಿ, ಆಸ್ತಿ ಗುಣಮಟ್ಟ ಸುಧಾರಿಸುವಲ್ಲಿ, ಗ್ರಾಹಕರನ್ನು ಸೆಳೆಯುವ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿಹಾಗೂ ಡಿಜಿಟಲ್ ಮತ್ತು ಕಾರ್ಯಾಚರಣಾ ಸ್ವರೂಪದ ಬದಲಾವಣೆಗಳನ್ನು ರೂಪಿಸುವಲ್ಲಿಗಮನಾರ್ಹ ದಾಖಲೆ ಹೊಂದಿದ್ದಾರೆ.

‘‘ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ತಾತ್ಕಾಲಿಕ ನೆಲೆಯಲ್ಲಿಜವಾಬ್ದಾರಿ ವಹಿಸಿಕೊಳ್ಳುತ್ತಿರುವುದನ್ನು ನಾನು ಗೌರವವೆಂದು ಭಾವಿಸುತ್ತೇನೆ. ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಬ್ಯಾಂಕ್ ನೊಂದಿಗೆ ಗುರುತಿಸಿಕೊಂಡಿರುವ ನನಗೆ, ಸಂಸ್ಥೆಯ ಶ್ರೀಮಂತ ಪರಂಪರೆ, ಅದರ ಸಾಮರ್ಥ್ಯಗಳು ಮತ್ತು ಅದರಲ್ಲಿಅಡಗಿರುವ ಅಪಾರ ಸಾಧ್ಯತೆಗಳನ್ನು ಅರಿಯುವ ಅವಕಾಶ ಸಿಕ್ಕಿದೆ’’ ಎಂದು ಬಿಜಿ ಎಸ್ .ಎಸ್ . ಹೇಳಿದ್ದಾರೆ.

ಫೊಟೊ-16ಎಂ-ಬಿಜಿ ಎಸ್ ಎಸ್