ಮೊಗ್ರಾಲ್ ನಲ್ಲಿಮಕ್ಕಳ ಚಿತ್ರಕಲಾ ಸಂಭ್ರಮ

Contributed by: shreemolu.93@gmail.com|Vijaya Karnataka•
childrens art festival in mogral showcase of talents from kasaragod district
ವಿಕ ಸುದ್ದಿಲೋಕ ಕುಂಬಳೆ

ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ನಲ್ಲಪಾಠಂ ಕ್ಲಬ್ ಹಾಗೂ ಮೊಗ್ರಾಲ್ ದೇಶೀಯ ವೇದಿಕೆ ಜಂಟಿ ಆಶ್ರಯದಲ್ಲಿಆಯೋಜಿಸಿದ್ದ ಕಾಸರಗೋಡು ಶಿಕ್ಷಣ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಗಮನ ಸೆಳೆಯಿತು.
‘ಕಾಸರಗೋಡಿನ ಇತಿಹಾಸ ಹಾಗೂ ಜೈವಿಕ ವೈವಿಧ್ಯತೆ’ ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಪೋಷಿಸಲು ಹಾಗೂ ಕಾಸರಗೋಡಿನ ಇತಿಹಾಸ, ಸಾಂಸ್ಕೃತಿಕ ಪರಂಪರೆ ಹಾಗೂ ಜೈವಿಕ ವೈವಿಧ್ಯತೆಯನ್ನು ಹೊಸ ಪೀಳಿಗೆಗೆ ಪರಿಚಯಿಸಲು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಯಿತು. ಸ್ಪರ್ಧೆಯಲ್ಲಿಭಾಗವಹಿಸಿದ ಎಲ್ಲವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಉಜ್ವಲ ಬಾಲ್ಯ ಪುರಸ್ಕಾರ ವಿಜೇತ ಇಶಾನ್ ಪಾಲ್ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ಎಂಸಿ ಅಧ್ಯಕ್ಷ ರಿಯಾಜ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಬಹುಮಾನ ವಿತರಣಾ ಸಮಾರಂಭದಲ್ಲಿಪಿಟಿಎ ಉಪಾಧ್ಯಕ್ಷ ಎಚ್ .ಎಂ. ಕರೀಂ, ದೇಶೀಯ ವೇದಿಕೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಟೈಲ್ಸ್ , ಮಾಜಿ ಅಧ್ಯಕ್ಷ ಟಿ.ಕೆ.ಅನ್ವರ್ , ಹಿರಿಯ ಸಹಾಯಕ ಜಾನ್ಸಿ ಚೆಲ್ಲಪ್ಪನ್ , ಸಿಬ್ಬಂದಿ ಕಾರ್ಯದರ್ಶಿ ಫಾತಿಮ ತಸ್ನೀಮ್ , ವಿಜು ಪಯ್ಯಾಡಕತ್ , ಫರ್ಸಾನ, ಮನೋಜ್ ಕುಮಾರ್ , ಅಸ್ಕರ್ , ಜಲೀಲ್ ಕೊಪ್ಪಳಂ ಮಾತನಾಡಿದರು. ರಶೀದ ಕೆ. ಸ್ವಾಗತಿಸಿದರು.

.....

16ಕೆಯು: ಮಕ್ಕಳ ಚಿತ್ರಕಲಾ ಸಂಭ್ರಮ ನಡೆಯಿತು.