ಕಟ್ಟಡ ಕಾರ್ಮಿಕರ ಪ್ರತಿಭಟನೆ, ಡಿಸಿಗೆ ಬೇಡಿಕೆಗಳ ನಿವೇದನೆ!

Contributed by: subramanya.bhat@timesofindia.com|Vijaya Karnataka•
construction workers protest for demand submission
ವಿಕ ಸುದ್ದಿಲೋಕ ಮಣಿಪಾಲ

ಉಡುಪಿ ಜಿಲ್ಲಾPಕ್ಷಿಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಹಲವು ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಕಾಯಿನ್ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆಯಲ್ಲಿಸಾಗಿ ಬಂದ ಕಾರ್ಮಿಕರು ಘೋಷಣೆ ಕೂಗಿದರು, ಧಿಕ್ಕಾರ ಹಾಕಿದರು. ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ ಅಹವಾಲು, ಕಷ್ಟ ನಷ್ಟ ಸಹಿತ ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟು ಈಡೇರಿಕೆಗೆ ಒತ್ತಾಯಿಸಿದರು.

ಬೇಡಿಕೆಗಳು ಏನು?

*ಕರಾವಳಿ ನಿಯಂತ್ರಣ ವಲಯ(ಸಿಆರ್ ಝೆಡ್ ) ವ್ಯಾಪ್ತಿಯಲ್ಲಿಮರಳುಗಾರಿಕೆ ತಕ್ಷಣ ಆರಂಭಿಸಿ, ಮರಳು ಕೊರತೆ ನೀಗಿಸಿ

*ಕೆಂಪು ಕಲ್ಲಿನ ಗಣಿಗಾರಿಕೆ, ಸಾಗಾಟದ ಸಮಸ್ಯೆ ಪರಿಹರಿಸಿ

*9/11ಸಮಸ್ಯೆಯಿಂದ ಕಟ್ಟಡ ನಿರ್ಮಾಣಕ್ಕೆ ಉಂಟಾದ ತೊಡಕು ನಿವಾರಿಸಿ

*ಕಟ್ಟ್ಟಡ ಪರವಾನಗಿಗೆ ಕಾರ್ಮಿಕ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡುವ ಪ್ರಕ್ರಿಯೆ ಸರಳಗೊಳಿಸಿ

ನಿರ್ಮಾಣ ಚಟುವಟಿಕೆ ಸ್ಥಗಿತವು ಬಡ-ಮಧ್ಯಮ ವರ್ಗದ ಜನರ ಮೇಲೆ ಹಾಗೂ ದಿನಗೂಲಿ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಜನಸಾಮಾನ್ಯರ ಬದುಕು, ಕಾರ್ಮಿಕರ ಉದ್ಯೋಗದ ದೃಷ್ಟಿಯಿಂದ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ತಕ್ಷಣ ಕರೆದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

ಸಿಜಿಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಸಿಜಿಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಡುಪಿ ಜಿಲ್ಲಾಕಟ್ಟಡ ಕಾರ್ಮಿಕರ ಸಂಘದ ಪ್ರಧಅನ ಕಾರ್ಯದರ್ಶಿ ಸುಭಾಶ್ಚಂದ್ರ ನಾಯಕ್ , ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಸಿಐಟಿಯು ಮುಖಂಡ ಎಚ್ . ನರಸಿಂಹ, ಬೈಂದೂರು ತಾಲೂಕು ಸಂಘದ ಗೋಪಾಲಕೃಷ್ಣ, ನಾಗರತ್ನ ಪಡುವರಿ, ಕುಂದಾಪುರ ತಾಲೂಕು ಸಂಘದ ಸಂತೋಷ್ ಹೆಮ್ಮಾಡಿ, ಶ್ರೀನಿವಾಸ ಪೂಜಾರಿ, ಕೃಷ್ಣ ಪೂಜಾರಿ, ಉಡುಪಿ ತಾಲೂಕು ಸಂಘದ ದಯಾನಂದ ಕೋಟ್ಯಾನ್ , ನಾಗೇಶ್ ಕಅರ್ಕಳ, ರಾಮ ಸಾಲಿಯಾನ್ , ರಾಮ ಕಾರ್ಕಡ, ಮರ್ಲ ದೇವಾಡಿಗ, ಅಲೆಕ್ಸಾಂಡರ್ ಉಪಸ್ಥಿತರಿದ್ದರು.

(ಫೋಟೊ ಫೈಲ್ 16ಯು ಸಿಐಟಿಯು1,2)