ಹೆಚ್ಚಿನ ಲಾಭದ ಆಸೆಗೆ 5.61 ಲಕ್ಷ ಕಳಕೊಂಡ

Contributed by: venkatesh.narasappa@timesofindia.com|Vijaya Karnataka•
5 61
ಹೆಚ್ಚಿನ ಲಾಭದ ಆಸೆಗೆ 5.61 ಲಕ್ಷ ಕಳಕೊಂಡ

ವಿಕ ಸುದ್ದಿಲೋಕ ಕಲಬುರಗಿ
ಹೆಚ್ಚಿನ ಲಾಭದ ಆಸೆ ತೋರಿಸಿ ಬ್ರಹ್ಮಪುರದ ವ್ಯಕ್ತಿಯೊಬ್ಬರಿಗೆ 5.61 ಲಕ್ಷ ರೂ. ವಂಚಿಸಲಾಗಿದೆ. ಸಿದ್ದಲಿಂಗಪ್ಪ ರೂವೂರ್ ವಂಚನೆಗೆ ಒಳಗಾದವರು. ನಕಲಿ ಆನ್ ಲೈನ್ ಷೇರು ಮಾರುಕಟ್ಟೆ ಟ್ರೇಡಿಂಗ್ ಆ್ಯಪ್ ಮೂಲಕ ಹೆಚ್ಚಿನ ಲಾಭದ ಆಮಿಷವೊಡ್ಡಿ ವಂಚಿಸಿದ್ದಾನೆ. ನಾನಾ ಟ್ರೇಡಿಂಗ್ ಕಂಪನಿಗಳ ಮ್ಯಾನೇಜರ್ ಗಳೆಂದು ವಾಟ್ಸಾಪ್ ಮೂಲಕ ಪರಿಚಯಿಸಿಕೊಂಡ ವಂಚಕರು, ನಕಲಿ ಆ್ಯಪ್ ನಲ್ಲಿಡಿಮ್ಯಾಟ್ ಖಾತೆ ತೆರೆಸಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆ್ಯಪ್ ನಲ್ಲಿಭಾರಿ ಲಾಭ ತೋರಿಸಿ, ಹಣ ಹಿಂಪಡೆಯಲು ಅವಕಾಶ ನೀಡದೆ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.