ದೋಹಾ: ಅಭಿಷೇಕ್ ಶರ್ಮ (70; 42 ಎಸೆತ) ಮತ್ತು ತಿಲಕ್ ವರ್ಮಾ(38*; 82 ಎಸೆತ) ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾ ನಿರುದ್ಧದ ಪಂದ್ಯದಲ್ಲಿಮರು ಹೋರಾಟ ಸಂಘಟಿಸಿದೆ.
ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆಯುತ್ತಿರುವ ಪಂದ್ಯದಲ್ಲಿಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, 49.2 ಓವರ್ ಗಳಲ್ಲಿ313 ರನ್ ಕಲೆಹಾಕಿತು. ಟೀಮ್ ಇಂಡಿಯಾದ ಸಂಘಟಿತ ಬೌಲಿಂಗ್ ಹೊರತಾಗಿಯೂ ಪಾಕಿಸ್ತಾನ ಪರ ಸದಾಕತ್ (59), ಹಸನ್ ನವಾಜ್ (79) ಮತ್ತು ಫರ್ಹಾನ್ ಯೂಸಫ್ (56) ಅರ್ಧ ಶತಕ ಗಳಿಸಿದರು.ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ಭಾರತ, 31 ಓವರ್ ಗಳಲ್ಲಿ6 ವಿಕೆಟ್ ಗೆ ನಷ್ಟಕ್ಕೆ 153 ರನ್ ಗಳಿಸಿತ್ತು.