ರೈತರಿಂದ ಸಾಲ ವಸೂಲಿ ತಕ್ಷಣ ನಿಲ್ಲಿಸಿ

Contributed by: chandregowda.n@timesofindia.com|Vijaya Karnataka•
farmer loan recovery must stop immediately
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ಜಿಲ್ಲೆಯ ರೈತರು ಬರದಿಂದ ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿರೈತರ ನೆರವಿಗೆ ನಿಲ್ಲುವುದನ್ನು ಬಿಟ್ಟು, ಅವರಿಂದಲೇ ಸಾಲ ವಸೂಲಿಗೆ ಮುಂದಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಕೊತ್ತೂರು ಮಂಜುನಾಥ್ ಅವರ ನಡೆ ಖಂಡನೀಯ ಎಂದು ರೈತರ ಸಂಘದ ಗೌರಿಬಿದನೂರು ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಹೇಳಿದರು.
ನಗರದಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ತಕ್ಷಣ ಸಾಲ ವಸೂಲಿ ಮಾಡುವ ಬ್ಯಾಂಕ್ ನಿರ್ಧಾರ ವಾಪಸ್ ಪಡೆಯಬೇಕು. ಒಂದು ವೇಳೆ ಸಾಲ ವಸೂಲಿಗೆ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬರ ಪರಿಸ್ಥಿತಿಯಲ್ಲಿಹೊಸದಾಗಿ ಬೆಳೆ ಬೆಳೆಯಲು ಸಾಲ ಕೊಡಬೇಕು. ರೈತರು ಉಳಿಯಬೇಕು, ಬ್ಯಾಂಕ್ ಗಳು ಉಳಿಯಬೇಕು. ಅದನ್ನು ಬಿಟ್ಟು ಬ್ಯಾಂಕ್ ಗಳನ್ನು ಮಾತ್ರ ಉಳಿಸಲು ರೈತರ ಶೋಷಣೆಗೆ ಇಳಿದಿರುವುದು ಖಂಡನೀಯ. ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಈ ಬಾರಿ ಸರಿಯಾದ ಮಳೆಯಿಲ್ಲದೆ ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇಂತಹ ಸಮಯದಲ್ಲಿನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ಸಾಲ ಮನ್ನಾ ಮಾಡುತ್ತೇವೆ, ನೀರು, ವಿದ್ಯುತ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ನಿಮ್ಮ ಜೀವನವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯುತ್ತೇವೆ ಎಂದು ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಬ್ಯಾಂಕ್ ಅಧ್ಯಕ್ಷರು ಮಾಡಬೇಕಿತ್ತು. ಆದರೆ, ರಾಷ್ಟ್ರೀಕೃತ ಹಾಗೂ ಕಮರ್ಷಿಯಲ್ ಬ್ಯಾಂಕ್ ಗಳೇ ಸಾಲ ವಸೂಲಾತಿಗೆ ಬರದೆ ಸುಮ್ಮನಿದ್ದು, ಕೇವಲ ನವೀಕರಣ ಮಾಡಿಸಿಕೊಳ್ಳಲು ಹೇಳುತ್ತಿರುವಾಗ ಡಿಸಿಸಿಸಿ ಬ್ಯಾಂಕ್ ನೋಟಿಸ್ ನೀಡಲು ಮುಂದಾಗಿರುವುದು ಸರಿಯಲ್ಲಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿರೈತ ಸಂಘದ ಎಂ.ಆರ್ . ಲಕ್ಷ್ಮೇನಾರಾಯಣ್ , ಲಕ್ಷ್ಮೇನಾರಾಯಣರೆಡ್ಡಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ರವಿಪ್ರಕಾಶ್ , ಗುಡಿಬಂಡೆ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಬಾಬು, ನಾರಾಯಣಪ್ಪ, ಈಶ್ವರ್ ರೆಡ್ಡಿ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.

16ಸಿಬಿಪಿಫೋಟೋ05

ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಎಸ್ . ಪುಟ್ಟಣ್ಣಯ್ಯ ಬಣದ ರೈತ ಸಂಘದ ಪದಾಧಿಕಾರಿಗಳು.