ವಿಕ ಸುದ್ದಿಲೋಕ ಹಾವೇರಿಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ರಸ್ತೆಯಲ್ಲಿನೂತನವಾಗಿ ನಿರ್ಮಾಣಗೊಂಡಿರುವ ನಕ್ಷತ್ರ ಕನ್ವೆನ್ಷನ್ ಹಾಲ್ ನ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ಹಾವೇರಿಯ ಉದ್ಯಮಿಗಳಾದ ನವೀನಕುಮಾರ ಹೇರೂರ ಹಾಗೂ ವಿಕಾಸಗೌಡ ಸಿದ್ದನಗೌಡ್ರ ಮಾಲೀಕತ್ವದಲ್ಲಿನಿರ್ಮಾಣಗೊಂಡ ನಕ್ಷತ್ರ ಕನ್ವೆನ್ಷನ್ ಹಾಲ್ ನ್ನು ಹುಕ್ಕೇರಿಮಠದ ಡಾ.ಸದಾಶಿವ ಸ್ವಾಮಿಗಳು ಲೋರ್ಕಾಪಣೆಗೊಳಿಸಿದರು.
ಬಳಿಕ ಮಾತನಾಡಿದ ಸದಾಶಿವ ಶ್ರೀಗಳು, ‘‘ಹಾವೇರಿ ನಗರದಲ್ಲಿನಕ್ಷತ್ರ ಕನ್ವೆನ್ಷನ್ ಹಾಲ್ ಹೊಸದಾಗಿ ಸೇರ್ಪಡೆಗೊಂಡಿರುವುದು ಸಂತಸವನ್ನುಂಟು ಮಾಡಿದೆ. ನಕ್ಷತ್ರ ಕಲ್ಯಾಣ ಮಂಟಪ ಹೊಸತನದ ವಿನ್ಯಾಸ ಅಳವಡಿಸಿಕೊಂಡಿದೆ. ಪ್ರಸ್ತುತ ದಿನಗಳಲ್ಲಿಕಲ್ಯಾಣ ಮಂಟಪಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಸ್ವಚ್ಛತೆ, ವಿದ್ಯುತ್ , ಪೆಂಡಾಲ್ , ಕಾರ್ಮಿಕರ ಸಮಸ್ಯೆ, ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನು ನಿರ್ವಹಣೆ ಮಾಡಬೇಕು. ಇಂತಹ ಸಮಸ್ಯೆಯ ಮೆಟ್ಟಿಲುಗಳನ್ನು ಮೀರಿ ನಕ್ಷತ್ರಕನ್ವೆನ್ಷನ್ ಹಾಲ್ ಪ್ರಜ್ವಲಿಸಲಿ. ಜನಸಾಮಾನ್ಯರು, ಬಡವರಿಗೂ ಕಲ್ಯಾಣ ಮಂಟಪದ ಸದ್ಬಳಕೆಯಾಗಲಿ’’ ಎಂದರು.