ಹುನಗುಂದ: ‘‘ಎರಡು ಸಾವಿರ ವರ್ಷಗಳ ಘನತೆಯ ಕನ್ನಡ ನುಡಿ ಅಸ್ಮಿತೆ ಎಂದೂ ಕುಂದಲಾರದು. ನಾಡವರು ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸುವುದರಿಂದ ಭಾಷೆ ಖಂಡಿತವಾಗಿ ಉಳಿಯುತ್ತದೆ,’’ ಎಂದು ಹಿರಿಯ ಲೇಖಕ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಸಾಹಿತ್ಯ ಸಮಾವೇಶ, ಕನ್ನಡ ಲೇಖಕರ ಪರಿಷತ್ ಹಾಗೂ ಎಸ್ ಆರ್ ಕೆ ಸ್ಮಾರಕ ಪ್ರತಿಷ್ಠಾನದ ಸಹಯೋಗದಲ್ಲಿಸಂಗಮ ಪ್ರತಿಷ್ಠಾನ ಹಮ್ಮಿಕೊಂಡ ಸಂಗಮ ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ರಾಮನಗೌಡ ಸಂದಿಮನಿ ಮಾತನಾಡಿ, ‘‘ಮಾಜಿ ಸಚಿವ ಎಸ್ .ಆರ್ . ಕಾಶಪ್ಪನವರ ಬದುಕು, ಸಾಧನೆ ಮತ್ತು ಸಮಗ್ರ ವ್ಯಕ್ತಿತ್ವ ಬಿಂಬಿಸುವ ಕವಿತೆಗಳನ್ನು ಬರೆದು ಪ್ರಸ್ತುತಪಡಿಸುವಲ್ಲಿಕವಿಗಳು ಯಶಸ್ವಿಯಾಗಿದ್ದಾರೆ,’’ ಎಂದರು.
ಎಸ್ .ಆರ್ .ಕೆ ಪ್ರತಿಷ್ಠಾನದ ಗೌರವಾಧ್ಯಕ್ಷೆ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಜನಾನುರಾಗಿ ಕಾಶಪ್ಪನವರ ಕವನ ಸಂಕಲನ ಸಂಪಾದಕಿ ಪ್ರಿಯಾಂಕಾ ಬಿರಜದಾರ ಮತ್ತು ಪಿಯು ಕಾಲೇಜು ಸಿಡಿಸಿ ಉಪಾಧ್ಯಕ್ಷ ಚಂದ್ರಶೇಖರ ಚಟ್ನಿಹಾಳ, ಶರಣಪ್ಪ ಹೂಲಗೇರಿ, ಎಸ್ಕೆ ಕೊನೆಸಾಗರ, ಶಾಂತಾ ಸಂಗಮ, ಐ.ಎಚ್ .ನಾಯಿಕ, ಡಾ.ಮುರ್ತುಜಾ ಒಂಟಿ ಇದ್ದರು.
------------
ಸಂಗಮ ಪ್ರಶಸ್ತಿ ಪ್ರದಾನ
ಕವಿಗೋಷ್ಠಿಯಲ್ಲಿ15 ಜನರು ಕವಿತೆ ಓದಿದರು. ಅಶೋಕ ಮಣಿ ಮತ್ತು ಶ್ರೀಶೈಲ ಹೊಸೂರ ಅವರಿಗೆ ಪ್ರಸಕ್ತ ವರ್ಷದ ಸಂಗಮ ಪ್ರಶಸ್ತಿ ಮತ್ತು ಯುವ ಲೇಖಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ .ಆರ್ .ಕೆ ಕವಿತಾ ಸ್ಪರ್ಧೆಯ ಕವಿಗಳಿಗೆ ಬಹುಮಾನ ವಿತರಿಸಲಾಯಿತು.
----
ಫೋಟೊ
ಹುನಗುಂದ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.