ಕುಮಾರಗೌಡಗೆ ಸಹಕಾರ ರತ್ನ ಪ್ರಶಸ್ತಿ ವಿಕ ಸುದ್ದಿಲೋಕ ಕೂಡ್ಲಿಗಿ
ಬೆಂಗಳೂರಿನಲ್ಲಿಸಹಕಾರ ಇಲಾಖೆಯಿಂದ ನಡೆದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿತಾಲೂಕಿನ ಕಾನಹೊಸಹಳ್ಳಿಯ ಸಹಕಾರ ಧುರೀಣ ಹಾಗೂ ಸಮಾಜ ಸೇವಕ ಕೆ.ಜಿ.ಕುಮಾರಗೌಡ ಅವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ಪ್ರದಾನ ಮಾಡಿದರು. ಸಾಕಷ್ಟು ವರ್ಷಗಳಿಂದಲೂ ಸಹಕಾರ ಕ್ಷೇತ್ರದಲ್ಲಿತಮ್ಮ ಛಾಪು ಮೂಡಿಸಿರುವ ಕೆ.ಜಿ.ಕುಮಾರಗೌಡ ಅವರು ಸಹಕಾರ ಕ್ಷೇತ್ರದ ಬೆಳವಣಿಗೆ ಹಾಗೂ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಹಕಾರ ರತ್ನ ಪ್ರಶಸ್ತಿಯು ಕೆ.ಜಿ.ಕುಮಾರಗೌಡ ಅವರಿಗೆ ಲಭಿಸಿರುವುದರಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಕೆ.ಜಿ.ಬಿಜ್ಜಳ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜುಟ್ಟಲಿಂಗನಹಟ್ಟಿ ನೀಲಮ್ಮ ಬೊಮ್ಮಣ್ಣ, ಕೆ.ಜಿ.ಸಿದ್ದನಗೌಡ, ಚಿರಂಜೀವಿ ಗೌಡ, ಸುಧಾಕರಗೌಡ, ಗ್ರಾಪಂ ಮಾಜಿ ಸದಸ್ಯರಾದ ರಮೇಶ್ , ಎಂ.ಹೊನ್ನೂರಪ್ಪ, ಜುಟ್ಟಲಿಂಗನಹಟ್ಟಿ ಬಸವರಾಜ, ಫೋಟೊ ಸಿದ್ಧಲಿಂಗಪ್ಪ, ಹಿರೇಕುಂಬಳಗುಂಟೆ ಮನೋಜ್ ಕುಮಾರ್ , ಗಫರ್ ಸಾಬ್ , ಇಮಡಾಪುರ ಟಿ.ನಾಗೇಂದ್ರಪ್ಪ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.
16 ಕೂಡ್ಲಿಗಿ 02
ಬೆಂಗಳೂರಿನಲ್ಲಿಸಹಕಾರ ಇಲಾಖೆಯಿಂದ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಕೆ.ಜಿ.ಕುಮಾರಗೌಡ ಅವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರದಾನ ಮಾಡಿದರು.