ಮಕ್ಕಳ ರಕ್ಷಣೆಗೆ ಕಾನೂನು ಅರಿವು ಅತ್ಯಗತ್ಯ

Contributed by: sunilkumarpapuu@gmail.com|Vijaya Karnataka•
legal awareness is essential to prevent childrens misdeeds
ನ್ಯಾ.ವಿಜಯಕುಮಾರ್ ಆನಂದಶೆಟ್ಟಿ

ಕೋಲಾರ: ಶಾಲಾ ಹಂತದಲ್ಲಿಯೇ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಬೃಹತ್ ’ಸುರಕ್ಷಿತ್ ಬಚಪನ್ ಅಭಿಯಾನ’ದ ಆಯ್ದ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಕೋಲಾರದ ಮಾನ್ಯ ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ.ಆನಂದಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದರು. ನಗರದ ಜಿಪಂ ಸಭಾಂಗಣದಲ್ಲಿಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿಹಾಗೂ ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿಶಿಕ್ಷಕರ ಪಾತ್ರ ಮತ್ತು ಕಾನೂನು ಅರಿವಿನ ಅಗತ್ಯವನ್ನು ಪ್ರಧಾನವಾಗಿ ತೆರೆದಿಟ್ಟರು. ಕೋಲಾರ ಒಂದನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್ .ಜಯಶ್ರೀ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ.ಬಾಗೇವಾಡಿ ಅವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೋಲಾರ ಜಿಲ್ಲಾವಕೀಲರ ಸಂಘದ ಅಧ್ಯಕ್ಷರಾದ ಎಲ್ .ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ನೀಲಾಚಾರಿ ಬಡಿಗೇರ, ಪ್ರಧಾನ ಸಾರ್ವಜನಿಕ ಅಭಿಯೋಜಕ ಮಾಧವ ಪದ್ಮನಾಭ ಗಾಂವರ್ , ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರುಗಳಾದ ಕೆ.ಎಸ್ .ಜ್ಯೋತಿಲಕ್ಷ್ಮೇ, ನಿರ್ಮಲಾ ಹಾಗೂ ಕೋಲಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್ .ಸಿ.ಜಗದೀಶ್ ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್

16ಕೆಎಲ್ ಆರ್ ಎಸ್ ಕೆ7: ಜಿಪಂ ಸಭಾಂಗಣದಲ್ಲಿಸೋಮವಾರ ನಡೆದ ’ಸುರಕ್ಷಿತ್ ಬಚಪನ್ ಅಭಿಯಾನ’ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.