ಕಾಸರಗೋಡಿನ ಪೆಟ್ರೋಲ್ ಪಂಪ್ ಗಳಲ್ಲೂಎಥೆನಾಲ್ ಪ್ರಮಾಣ ಪರೀಕ್ಷೆ

Contributed by: gangadhar.korekkana@gmail.com|Vijaya Karnataka•
petrol pumps in kasaragod testing ethanol levels
ವಿಕ ಸುದ್ದಿಲೋಕ ಕಾಸರಗೋಡು

ಪೆಟ್ರೋಲ್ ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಬೆರೆಸಿ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕಾಸರಗೋಡು ಹಾಗೂ ಆಲಪ್ಪುಯ ಜಿಲ್ಲೆಗಳ ನಾಲ್ಕು ಪೆಟ್ರೋಲ್ ಬಂಕ್ ಗಳಲ್ಲಿ ನಾಗರಿಕ ಪೂರೈಕೆ ಇಲಾಖೆ ತಪಾಸಣೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ.
ಪೆಟ್ರೋಲ್ ಕಂಪನಿಗಳ ಅಧಿಕಾರಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಯಿತು. ಕಳೆದ ವಾರ ನಾಲ್ಕು ಜಿಲ್ಲೆಗಳ ಒಂಬತ್ತು ಬಂಕ್ ಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಗ್ರಾಹಕರಿಗೆ ಗುಣಮಟ್ಟದ ಇಂಧನ ಒದಗಿಸುವುದನ್ನು ಖಚಿತಪಡಿಸುವುದು ಹಾಗೂ ಇಂಧನ ಕಲಬೆರಕೆ ಮತ್ತು ಇತರ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇರಳ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ. ಪರೀಕ್ಷೆಯಲ್ಲಿನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಇರುವುದು ಪತ್ತೆಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಲಾಗುವುದು. ಮುಂದಿನ ದಿನಗಳಲ್ಲಿಯೂ ವಿವಿಧ ಜಿಲ್ಲೆಗಳಲ್ಲಿತಪಾಸಣೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥನಾಲ್ ಬೆರೆಸಿದ ಇಂಧನ ಮಾರಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿಕೇರಳದಲ್ಲಿಯೂ ತಪಾಸಣೆ ನಡೆಸಲು ಆದೇಶಿಸಲಾಗಿತ್ತು. ಆಲಪ್ಪುಯ ಜಿಲ್ಲೆಯ ಬಿಪಿಸಿಎಲ್ ಬಂಕ್ ಹಾಗೂ ತೃಕ್ಕುನ್ನಪ್ಪುಯದಲ್ಲಿರುವ ಐಒಸಿ ಪಂಪ್ ಗಳಲ್ಲಿನಿನ್ನೆ ತಪಾಸಣೆ ನಡೆಸಲಾಯಿತು. ಸಂಗ್ರಹಿಸಿದ ಮಾದರಿಗಳನ್ನು ಎರ್ನಾಕುಳಂ ಪ್ರಾದೇಶಿಕ ಕೆಮಿಕಲ್ ಎಕ್ಸಾಮಿನರ್ಸ್ ಪ್ರಯೋಗಾಲಯದಲ್ಲಿಪರೀಕ್ಷೆಗೆ ಕಳುಹಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿಜಿಯೋ ಪಂಪ್ ಹಾಗೂ ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿರುವ ಜಿಯೋ ಪಂಪ್ ಮತ್ತು ಅಣಂಗೂರು ಕರಂದಕ್ಕಾಡು ಅಗ್ನಿಶಾಮಕ ಠಾಣೆಯ ಸಮೀಪದಲ್ಲಿರುವ ಐಒಸಿ ಪಂಪ್ ಗಳಲ್ಲಿತಪಾಸಣೆ ನಡೆಸಲಾಯಿತು. ಸಂಗ್ರಹಿಸಿದ ಮಾದರಿಗಳನ್ನು ಕೋಝಿಕ್ಕೋಡ್ ಪ್ರಾದೇಶಿಕ ಕೆಮಿಕಲ್ ಎಕ್ಸಾಮಿನರ್ಸ್ ಪ್ರಯೋಗಾಲಯದಲ್ಲಿಪರೀಕ್ಷೆಗೆ ಕಳುಹಿಸಲಾಗುವುದು. ಡಿಎಸ್ ಒ ಬಿಂದು ಕೆ.ಎನ್ ., ಕಾಸರಗೋಡು ಟಿಎಸ್ ಒ ಕೃಷ್ಣ ನಾಯಕ್ ಬಿ.,ವೆಳ್ಳರಿಕುಂಡು ಟಿಎಸ್ ಒ ಶಕುಂತಳಾ ಟಿ.ಪಿ. ಮತ್ತಿತರರು ತಪಾಸಣೆಯಲ್ಲಿಭಾಗವಹಿಸಿದ್ದರು.

ಚಿತ್ರ:16ಕೆಎಸ್ ಬಂಕ್